ತುಮಕೂರು: ಪ್ರೇಯಸಿಯನ್ನು ಕೊಂದ ಪಾಪಿಗೆ 6 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ!

ಕೊಲೆ ಆರೋಪಿ ರೋಹಿತ್
ಕೊಲೆ ಆರೋಪಿ ರೋಹಿತ್
ತುಮಕೂರು

ತುಮಕೂರು:

2019ರ ಫೆಬ್ರವರಿ 2ನೇ ತಾರೀಖು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಬಳಿ ಯುವತಿಯ ಶವ ಪತ್ತೆಯಾಗಿದ್ದು. ಯುವತಿಯ ತಲೆ ಮುಖ ರಕ್ತ ಸಿಕ್ತವಾಗಿತ್ತು. ಪೆಟ್ರೋಲ್ ಬಂಕ್ ನ ಯೂನಿಫಾರ್ಮ್ ಬಿಟ್ಟರೆ ಈ ಮೃತದೇಹದ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಹೆತ್ತವರು ಕೂಡ ದೂರು ನೀಡಲು ಮುಂದೆ ಬರಲಿಲ್ಲ. ಆದರೂ ಪಟ್ಟು ಬಿಡದ ಹುಲಿಯೂರುದುರ್ಗ ಪೊಲೀಸರು ಈ ಭೀಕರ ಹತ್ಯೆಯ ಬೆನ್ನು ಬಿದಿದ್ದಾರೆ.

ಪೆಟ್ರೋಲ್ ಬಂಕ್ ನ ಮಾಲೀಕ ಈ ಮೃತ ಯುವತಿಯನ್ನು ಗುರುತಿಸಿದ್ದಾರೆ. ಪೊಲೀಸರಿಗೆ ಅಷ್ಟು ಸಾಕಾಗಿತ್ತು. ಸಾವಿಗೀಡಾದ ಯುವತಿ ಅರ್ಪಿತಾ ಅನ್ನೋದು ಪೊಲೀಸರಿಗೆ ಗೊತ್ತಾಗಿತ್ತು. ಜೊತೆಗೆ ಇದು ಆಕ್ಸಿಡೆಂಟ್‌ ಅಲ್ಲ, ಬದಲಾಗಿ ಕೊಲೆ ಅನ್ನೋ ಅನುಮಾನ ಕೂಡ ಮೂಡೋದಕ್ಕೆ ಶುರುವಾಗಿತ್ತು. ಆರೋಪಿ ಲೋಹಿತ್ ಹಾಗೂ ಅರ್ಪಿತಾ ಪರಸ್ಪರ ಪ್ರೀತಿಸುತ್ತಿದ್ದ ವಿಷಯ ತಿಳಿದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಒಂದೊಂದೇ ವಿಚಾರಗಳು ಬಯಲಾಗ್ತಾ ಹೋಗಿವೆ. ಬೆಂಗಳೂರಿನ ಕಮಲಾನಗರದಲ್ಲಿ ಜತೆಯಾಗಿ ಐದಾರು ತಿಂಗಳು ವಾಸವಾಗಿದ್ದು, ಆ ಬಳಿಕ ಇಬ್ಬರ ನಡುವೆ ವೈಮನಸ್ಸು ಬಂದು ದೂರವಾಗಿದ್ದು, ಇದೆಲ್ಲದರ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಆರಂಭದಲ್ಲಿ ನನಗೇನೂ ಗೊತ್ತಿಲ್ಲಾ ಅಂತಿದ್ದ ಲೋಹಿತ ಪೊಲೀಸರ ಕ್ರಾಷ್ ಕ್ವಶ್ಚನ್‌ಗೆ ಬೆದರಿ ಹೋಗಿದ್ದ. ನಂತರ ಒಂದೊಂದೇ ವಿಚಾರವನ್ನು ಹೇಳಿದ್ದಾನೆ.

ಅರ್ಪಿತಾಳನ್ನು ಕೊಲೆ ಮಾಡುವ ಉದ್ದೇಶದಿಂದಲೇ 2019ರ ಫೆಬ್ರವರಿ 2 ರಂದು ಸಂಜೆ ಬೆಂಗಳೂರಿನ ಪಾರ್ಕ್‌ಗೆ ಕರೆಸಿಕೊಂಡಿದ್ದನಂತೆ. ಪಾರ್ಕ್‌, ಹೋಟಲ್ ಹೀಗೆ ಎಲ್ಲಾ ಕಡೆ ಸುತ್ತಾಡಿಸಿ ಯಶವಂತಪುರ, ನೆಲಮಂಗಲ ಮಾರ್ಗವಾಗಿ ತುಮಕೂರಿನ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಬಳಿ ರಾತ್ರಿ ಕರೆದುಕೊಂಡು ಬಂದಿದ್ದ. ನಿರ್ಜನ ಪ್ರದೇಶದಲ್ಲಿ ಬೈಕ್ ನಿಂದ ಬೀಳಿಸಿ ಚಪ್ಪಲಿ ಕಾಲಿನಿಂದ ಕುತ್ತಿಗೆ ಹಿಸುಕಿದ್ದಾನೆ. ಬಳಿಕ ಆಕೆ ಸತ್ತಿದ್ದಾಳಾ ಇಲ್ವಾ ಅನ್ನೋದರ ಖಾತರಿಯಾಗದೇ ಇದ್ದಾಗ, ಆಕೆಯ ಮೇಲೆ ಕಲ್ಲು ಬಂಡೆ ಎತ್ತಿಹಾಕಿದ್ದಾನೆ. ಸದ್ಯ ಪಾಪಿ ಪ್ರಿಯತಮ ಲೋಹಿತ್‌ ವಿರುದ್ದ ಆರೋಪ ಸಾಬೀತಾದ ಹಿನ್ನೆಲೆ ತುಮಕೂರಿನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಅನಂತ್ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಸರ್ಕಾರದ ಪರವಾಗಿ ಅಭಿಯೋಜಕಿ ವಿ.ಎ ಕವಿತಾ ವಾದ ಮಂಡಿಸಿದ್ದರು. ಹುಲಿಯೂರುದುರ್ಗ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಕೊಲೆಯ ಬಳಿಕ ಲೋಹಿತ್ ತಿಪಟೂರು ತಾಲೂಕಿನ ಬೊಮ್ಮನಹಳ್ಳಿಯ ರಾಮ-ಲಕ್ಷ್ಮಣ ದೇವರ ಬೆಟ್ಟದಲ್ಲಿ ಪಾಂಟ್ ಹಾಗೂ ಶರ್ಟ್ ಸುಟ್ಟು ಹಾಕಿದ್ದ ವಿಷಯ ತನಿಖೆಯಲ್ಲಿ ಬಹಿರಂಗವಾಗಿದೆ. ಹುಡುಗಿಯರೇ ಎಚ್ಚರ ಸಿಕ್ಕ ಸಿಕ್ಕವರ ಜೊತೆ ಲೀವಿಂಗ್ ಟುಗೆದರ್‌ ನಲ್ಲಿ ಇರೋಕೂ ಮುನ್ನ ಎಚ್ಚರ ವಹಿಸಲೇಬೇಕು.

Author:

...
Editor

ManyaSoft Admin

Ads in Post
share
No Reviews