TUMKUR- : ಮುಂದುವರೆದ ವಾಸಣ್ಣ- ರಾಜಣ್ಣ ಅಭಿಮಾನಿಗಳ ಬಣ ಬಡಿದಾಟ

ತುಮುಲ್‌ ಅಧ್ಯಕ್ಷ ಚುನಾವಣೆ ಬಳಿಕ ತುಮಕೂರಿನ ಕಾಂಗ್ರೆಸ್‌ ಬಣದಲ್ಲಿ ಒಣ ಬೇಗುದಿ ಶುರುವಾಗಿದ್ದು, ತಣ್ಣಗಾಗುವ ಲಕ್ಷಣ ಮಾತ್ರ ಕಾಣಿಸ್ತಾ ಇಲ್ಲ.. ತುಮುಲ್‌ ಅಧ್ಯಕ್ಷ ಪಟ್ಟ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಪತ್ನಿ ಭಾರತಿ ಶ್ರೀನಿವಾಸ್‌ಗೆ ತಪ್ಪಿದ್ದರಿಂದ ಕಾಂಗ್ರೆಸ್‌ನ ದಿಗ್ಗಜ ನಾಯರ ನಡುವೆ ಅಸಮಾಧಾನದ ಬೇಗುದಿ ಶುರುವಾಗಿತ್ತು, ತುಮುಲ್‌ ಅಧ್ಯಕ್ಷ ಚುನಾವಣೆ ಮುಗಿದು ಸರಿ ಸುಮಾರು ಒಂದೂವರೆ ತಿಂಗಳು ಕಳೆದ್ರು ಕೂಡ ಅಸಮಾಧಾನದ ಬೇಗುದಿ ಮಾತ್ರ ತಣ್ಣಗೆ ಆಗುವ ಲಕ್ಷಣ ಮಾತ್ರ ಕಾಣಿಸ್ತಾ ಇಲ್ಲ.. ಸಚಿವ ರಾಜಣ್ಣ, ಪರಮೇಶ್ವರ್‌ ವಿರುದ್ಧ ಎಸ್‌. ಆರ್‌ ಶ್ರೀನಿವಾಸ್‌ ಆಕ್ರೋಶ ಹೊರಹಾಕ್ತಾ ಇದ್ದು, ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಕೆ.ಎನ್ ರಾಜಣ್ಣ ಕಾರಣ ಅಂತ ಶ್ರೀನಿವಾಸ್‌ ಕಿಡಿಕಾರುತ್ತಿದ್ದರು..  ಅಲ್ದೇ ಮೂವರು ನಾಯಕರುಗಳು ಕೂಡ ಬಹಿರಂಗವಾಗಿ ಹೇಳಿಕೆಗಳನ್ನು ಕೊಡ್ತಾ ಇದ್ರು. ಇದ್ರಿಂದ ಕಾಂಗ್ರೆಸ್‌ಗೆ ತೀವ್ರ ಮುಜುಗರವನ್ನು ಉಂಟು ಮಾಡಿತ್ತು. ಹೀಗಾಗಿ ಕೂಡಲೇ ಕೂಡಲೇ ಅಲರ್ಟ್‌ ಆದ ಕಾಂಗ್ರೆಸ್‌ ಹೈಕಮಾಂಡ್‌ ಬಹಿರಂಗವಾಗಿ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ರು. ಆದ್ರೆ ನಾಯಕರ ನುಡುವಿನ ಮುಸುಕಿನ ಗುದ್ದಾಟ ಮಾತ್ರ ಕಡಿಮೆ ಆಗ್ತಾ ಇರಲಿಲ್ಲ… ಈ ಮಧ್ಯೆ ಗುಬ್ಬಿ ವಾಸಣ್ಣ ಕಾಂಗ್ರೆಸ್‌ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕ್ತಾ ಇದ್ದು, ವಾಸಣ್ಣ ಕಾಂಗ್ರೆಸ್‌ ಬಿಟ್ಟು ಮತ್ತೆ ಜೆಡಿಎಸ್‌ಗೆ ಹೋಗ್ತಾರಾ ಎಂಬ ಚರ್ಚೆ ಕೂಡ ತಾರಕ್ಕೇರಿತ್ತು.. ಜೊತೆಗೆ ಕಾಂಗ್ರೆಸ್‌ಗೆ ಬಂದು ತಪ್ಪು ಮಾಡಿದೆ ಎಂದು ಪರೋಕ್ಷವಾಗಿ ಎಸ್‌ ಆರ್‌ ಶ್ರೀನಿವಾಸ್‌ ಅಸಮಾಧಾನ ಹೊರಹಾಕಿದ್ರು. ಈಗ ನಾಯಕರ ಜಗಳಕ್ಕೆ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದು ಕಾಂಗ್ರೆಸ್‌ ಪಾಳಯದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಸಿದೆ.

ಹೌದು, ಹೈಕಮಾಂಡ್‌ ಸೂಚನೆ ಬಳಿಕ ನಾಯಕರು ಅಸಮಾಧಾನದ ಬಗ್ಗೆ ತೋರಿಸಿಕೊಳ್ಳೋದನ್ನ ಕಡಿಮೆ ಮಾಡಿದ್ರು. ತಮ್ಮ ನೆಚ್ಚಿನ ನಾಯಕ ಸುಮ್ಮನಾದರೂ ಅಭಿಮಾನಿಗಳು ಸುಮ್ಮನಾಗ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ರಾಜಣ್ಣ ಹಾಗೂ ಪರಮೇಶ್ವರ್ ವಿರುದ್ಧ ಅಭಿಮಾನಿಗಳು ಪೋಸ್ಟ್ ಚಳುವಳಿ ಆರಂಭಿಸಿದ್ದಾರೆ. ಎಸ್.ಆರ್. ಶ್ರೀನಿವಾಸ್ ಗುಬ್ಬಿ ಎಂ.ಎಲ್.ಎ ಫ್ಯಾನ್ಸ್ ಪೇಜ್ ನಲ್ಲಿ ಪೋಸ್ಟ್‌ ಹಾಕುವ ಮೂಲಕ ರಾಜಣ್ಣ ವಿರುದ್ಧ ಎಸ್‌.ಆರ್‌ ಶ್ರೀನಿವಾಸ್‌ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಶೀಘ್ರದಲ್ಲೇ ಸಚಿವ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎಂದು ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಹಾಕಲಾಗಿದೆ. ಅಲ್ದೇ ಆ ಪೋಸ್ಟ್ ನನ್ನು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಕಂಪ್ಯೂಟರ್ ನೋಡುವ ಚಿತ್ರ ಎಡಿಟ್ ಮಾಡಿ ಫೇಸ್‌ಬುಕ್‌ ಪೇಜ್‌ನಲ್ಲಿ ಅಭಿಮಾನಿಗಳು ಹಾಕಿದ್ದಾರೆ. ಜೊತೆಗೆ ಯೋಗ್ಯತೆಗೆ ತಕ್ಕಂತೆ ಮುಚ್ಚಿಕೊಂಡು ಮಧುಗಿರಿಯಲ್ಲಿ ಇರು ಎಂದು ಶ್ರೀನಿವಾಸ್ ಗುಬ್ಬಿ ಫ್ಯಾನ್ಸ್ ಪೇಜ್ ಪೋಸ್ಟ್ ಮಾಡಿದ್ದಾರೆ.. ಹೈಕಮಾಂಡ್‌ ಎಚ್ಚರಿಕೆಗೂ ಕೇರ್‌ ಮಾಡದ ಅಭಿಮಾನಿಗಳು ಪೋಸ್ಟ್‌ ಮಾಡಿದ್ದು ತುಮಕೂರಿನ ಕಾಂಗ್ರೆಸ್‌ ಪಾಳಯದಲ್ಲಿ ಒಳಬೇಗುದಿ ಮುಂದುವರೆಯುತ್ತಲೇ ಇದೆ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.


ಅದೇನೆ ಆಗಲಿ, ತುಮುಲ್‌ ಅದ್ಯಕ್ಷ ಪಟ್ಟ ಸ್ಥಾನದಿಂದ ತುಮಕೂರಿನ ದಿಗ್ಗಜ ನಾಯಕರ ನಡುವೆ ಹಾಗೂ ಅಭಿಮಾನಿಗಳ ನಡುವೆ ಅಸಮಾಧಾನ ಹೊಗೆ ಆಡ್ತಾ ಇದ್ದು, ಮುಂದೆ ಯಾವ ರೀತಿಯ ಬಣ ಬಡಿದಾಟ ಶುರುವಾಗುತ್ತೋ.. ಎಸ್‌.ಆರ್‌ ಶ್ರೀನಿವಾಸ್‌ ಮತ್ತೆ ಮರಳಿ ಗೂಡು ಎಂಬಂತೆ ತಮ್ಮ ಸ್ವಪಕ್ಷಕ್ಕೆ ಮರಳುತ್ತಾರೋ ಎಂದು ಕಾದುನೋಡಬೇಕಿದೆ.

 

Author:

...
Editor

ManyaSoft Admin

share
No Reviews