ತುಮಕೂರು :
ತುಮಕೂರು ನಗರ ಶಿಕ್ಷಣಕ್ಕೆ ಮಾತ್ರವಲ್ಲದೇ ನಾನಾ ಉದ್ಯಮಗಳಿಗೂ ಹೆಸರುವಾಸಿಯಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ತುಮಕೂರು ನಗರದ ಗಾರ್ಬೆಜ್ ಸಿಟಿಯಾಗಿ ಚೇಂಜ್ ಆಗ್ತಾ ಇದ್ದು, ಇಡೀ ಸಿಟಿ ಗಬ್ಬೇದು ನಾರುತ್ತಿದೆ. ನಗರದ ಬಹುತೇಕ ಏರಿಯಾಗಳಲ್ಲಿ ಕಸದ ಸಮಸ್ಯೆ ಎದುರಾಗಿದ್ದು, ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ದುಸ್ಥಿತಿ ಇದೆ. ರಾಶಿ ರಾಶಿ ಕಸ ಕೊಳೆತು ಸಾಂಕ್ರಾಂಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿ ಜನರಿದ್ದಾರೆ. ಪಾಲಿಕೆ ಒಂದು ಕಡೆಯಿಂದ ಕಸವನ್ನು ಸ್ವಚ್ಛ ಮಾಡ್ತಾ ಹೋದರೆ ಮತ್ತೊಂದು ಕಡೆಯಿಂದ ಜನರು ರಸ್ತೆಗೆ ಕಸ ತಂದು ಸುರಿಯುವ ಕೆಲಸ ಮಾಡ್ತಾ ಇದ್ದಾರೆ. ಕಸದ ಸಮಸ್ಯೆಯಿಂದಾಗಿ ನಗರದ ಸೌಂದರ್ಯವೇ ಹಾಳಾಗಿ ಹೋಗ್ತಾ ಇದ್ದು, ಗಾರ್ಬೇಜ್ ಸಿಟಿ ಎಂಬ ಹಣೆಪಟ್ಟಿ ಪಡೆದುಕೊಂಡಿದೆ.
ಯುಗಾದಿ, ರಂಜಾನ್ ಹಬ್ಬ ಮುಗಿದ ಬಳಿಕ ನಗರದ ಹಲವೆಡೆ ರಾಶಿ ರಾಶಿ ಬಿದ್ದಿರುವುದು ಕಂಡು ಬಂದಿದೆ, ಅದರಲ್ಲೂ ಮುಸ್ಲಿಂ ಬಾಂಧವರು ಹೆಚ್ಚಾಗಿರೋ ಸದಾಶಿವ ನಗರದ ಮುಖ್ಯ ರಸ್ತೆಗಳಲ್ಲಿ ಕಸದ ಸಮಸ್ಯೆ ತಲೆದೋರಿದೆ. ರಸ್ತೆ ಬದಿಗಳಲ್ಲಿ ಜನರು ಕಸವನ್ನು ತಂದು ಸುರಿದಿರೋದು ಕಂಡು ಬಂದಿದೆ. ಕಸ ಸುರಿದಿದ್ದರೂ ಪಾಲಿಕೆ ಸಿಬ್ಬಂದಿ ಮಾತ್ರ ಕಸ ಎತ್ತುವ ಕೆಲಸವನ್ನು ಮಾಡ್ತಾ ಇಲ್ಲ, ಇದರಿಂದ ಕಳೆದ ಮೂರ್ನಾಲ್ಕು ದಿನದಿಂದ ಕಸ ಕಳೆದು ದುರ್ನಾತ ಬೀರುತ್ತಿದೆ.
ಸದಾಶಿವ ನಗರದ ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಕೂಡ ಜನರು ಮಾತ್ರ ಡೋಂಟ್ ಕೇರ್ ಅಂದಿದ್ದು, ಭಯಪಡದೇ ರಸ್ತೆ ಬದಿ ಕಸ ತಂದು ಸುರಿದು ಹೋಗ್ತಿದ್ದಾರೆ, ಕಸದಿಂದ ನಿವಾಸಿಗಳಿಗೆ ತೊಂದರೆ ಆಗುತ್ತೆ ಅಂತಾ ಗೊತ್ತಿದ್ದರೂ ಕೂಡ ಜನರು ಮಾತ್ರ ಬುದ್ದಿ ಇಲ್ಲದ ಕೆಲಸ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ ಮನೆ ಮುಂದೆ ಕಸದ ಗಾಡಿ ಬಂದರು ಕೂಡ ಕಸ ಹಾಕಲು ಲೇಸಿ ಆಗಿ, ಕಸದ ಗಾಡಿ ಹೋದಮೇಲೆ ಕಸವನ್ನು ರೋಡ್ ಪಕ್ಕಕ್ಕೆ ಬಂದು ಸುರಿದು ಹೋಗ್ತಾ ಇರೋದು ಕಂಡು ಬರ್ತಾ ಇದೆ.
ಇತ್ತ ರಾಶಿ ರಾಶಿ ಕಸದ ರಾಶಿ ಬಿದ್ದಿದ್ದರೂ ಕೂಡ ಪಾಲಿಕೆ ಸಿಬ್ಬಂದಿ ಕಸ ಎತ್ತುವ ಕೆಲಸ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದು, ಮೂರು ದಿನ ಆದರೂ ಕಸವನ್ನು ಎತ್ತುವ ಕೆಲಸ ಮಾತ್ರ ಮಾಡ್ತಾ ಇಲ್ಲ. ಅಲ್ಲದೇ ಏರಿಯಾದಲ್ಲಿ ಸಿಸಿ ಕ್ಯಾಮೆರಾ ಇದ್ದು ಕಸ ಹಾಕುವವರನ್ನು ಪತ್ತೆ ಹಚ್ಚಿ ಫೈನ್ ಹಾಕುವಂತಹ ಕೆಲವನ್ನು ಕೂಡ ಪಾಲಿಕೆ ಮಾಡ್ತಾ ಇಲ್ಲ. ಇತ್ತ ಜನರು ಕೂಡ ಕೇರ್ ಲೆಸ್ ಆಗಿ ಕಸ ಹಾಕ್ತಿದ್ದು. ಜನರು ಕೂಡ ಪಾಠ ಹೇಳಿಕೊಡಬೇಕಿದೆ. ಪಾಲಿಕೆಯ ಜೊತೆ ಜನರು ಕೂಡ ಕೈ ಜೋಡಿಸಿದರೆ ಮಾತ್ರ ನಗರದಲ್ಲಿ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತೆ ಇಲ್ಲವಾದರೆ ತುಮಕೂರು ನಗರ ಗಾರ್ಬೇಜ್ ಸಿಟಿ ಆಗೋದಂತೂ ಪಕ್ಕ.