ತುಮಕೂರು:
ತುಮಕೂರಿನ ಟೌನ್ ಹಾಲ್ ನಲ್ಲಿ 31 ವರ್ಷದಿಂದ ರಾಜ್ ಕುಮಾರ್ ಹೋಟೆಲ್ ನಡೆಸುತ್ತಿದ್ದ ಕುಮಾರ್, ನೈಟ್ ಹೋಟೆಲ್ ಕುಮಾರಣ್ಣ, ಚಿತ್ರಾನ್ನ ಕುಮಾರಣ್ಣ, ಎಂದೇ ಹೆಸರುವಾಸಿಯಾಗಿದ್ದ ಕುಮಾರ್ ಅವರು ನೆನ್ನೆ ತಡರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ನೆನ್ನೆ ರಾತ್ರಿ ಹೋಟೆಲ್ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಆಚೆ ಬರುತ್ತಿದ್ದಾಗ ಕುಮಾರ್ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ, ಕೂಡಲೇ ಕುಟುಂಬಸ್ಥರು ಕುಮಾರ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕುಮಾರ್ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದಾರೆ.
ಇವರು ಬಡವರಿಗೆ, ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಯಾರೇ ಹಣವಿಲ್ಲದೆ ಬಂದರು ಸಹ ಊಟ ನೀಡಿ ಬಡವರ ಹೊಟ್ಟೆ ತುಂಬಿಸುತ್ತಿದ್ದ ಕುಮಾರ್ ಅವರನ್ನು ಕಳೆದುಕೊಂಡ ತುಮಕೂರಿಗರು ಇಂದು ಕಂಬನಿ ಮಿಡಿದಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿಯೂ ಸಹ ಗುರುತಿಸಿಕೊಂಡಿದ್ದು ರಾಜಕುಮಾರ್ ಕುಟುಂಬದ ಜೊತೆ ಹಾಗೂ ಕನ್ನಡ ಚಿತ್ರರಂಗದ ಜೊತೆಯು ಸಹ ಒಳ್ಳೆ ನಂಟನ್ನು ಹೊಂದಿದ್ದರು. ಶಿವರಾಜ್ ಕುಮಾರ್ ನಟನೆಯ ಓಂ ಸಿನಿಮಾ ಹಾಗೂ ಅಜಯ್ ರಾವ್ ನಟನೆಯ ಕೃಷ್ಣ ರುಕ್ಕು ಹಾಗೂ ಇನ್ನು ಹಲವಾರು ಸಿನಿಮಾಗಳಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದು, ಚಿತ್ರರಂಗದ ಹಲವರು ಸಹ ಕುಮಾರ್ ರವರ ಅಂತಿಮ ದರ್ಶನ ಪಡೆದು ಭಾವುಕರಾಗಿದ್ದಾರೆ.