ತುಮಕೂರು :
ತುಮಕೂರಿನಲ್ಲಿ ಎರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದೆ. ನಿನ್ನೆ ರಾತ್ರಿ ಪೂರ್ತಿ ನಗರದ ಹಲವೆಡೆ ಸುರಿದಿದ್ದ ಮಳೆ, ಬೆಳಗ್ಗೆ ಕೊಂಚ ಬಿಡುವು ಕೊಟ್ಟಿತ್ತು. ಆದರೆ ಮಧ್ಯಾಹ್ನದ ವೇಳೆ ಮತ್ತೆ ನಗರದ ಹಲವೆಡೆ ಮಳೆಯಾಗಿದ್ದು ಜನರು ಹೈರಾಣಾಗಿದ್ದಾರೆ.
ತುಮಕೂರು ನಗರದ ಸದಾಶಿವ ನಗರ, ಬನಶಂಕರಿ, ಔಟರ್ ರಿಂಗ್ ರೋಡ್, ಜಯನಗರ, ಗುಬ್ವಿ ಗೇಟ್, ಮಂಡಿಪೇಟೆ ಸೇರಿ ಸಂಜೆ ಮತ್ತೆ ಮಳೆ ಶುರುವಾಗಿತ್ತು. ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ರಸ್ತೆ ತುಂಬಾ ಮಳೆ ನೀರು ಹರಿದಿದೆ. ದಿಢೀರ್ ಮಳೆಯಿಂದ ವಾಹನ ಸವಾರರು ಹೈರಾಣಾದರು, ಇನ್ನು ಬಿರುಗಾಳಿ ಸಹಿತ ಭಾರೀ ಮಳೆಗೆ ಮುಂದೆ ರಸ್ತೆಯೇ ಕಾಣದಂತಹ ಸ್ಥಿತಿ ನಿರ್ಮಾಣ ಆಗಿತ್ತು.
ಒಂದುಕಡೆ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ತುಮಕೂರಿಗರು ಮಳೆಯಿಂದ ಕೊಂಚ ನಿಟ್ಟುಸಿರು ಬಿಟ್ಟರೆ. ಅಕಾಲಿಕ ಮಳೆಯ ಅವಾಂತರದಿಂದ ವಾಹನ ಸವಾರರು ಹೈರಾಣಾದರು. ನಿನ್ನೆ ಸುರಿದ ಮಳೆಯಿಂದ ಕೆಲವು ಅವಾಂತರಗಳಾಗಿದ್ದು, ಇಂದು ಸಂಜೆ ನಾಲ್ಕುವರೆಯಿಂದ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ಸವಾರರು ಹೈರಾಣಾಗಿದ್ದಾರೆ.