ತುಮಕೂರು : ಶತಮಾನ ಕಂಡ ಶಾಲೆಗೆ ಇದೆಂಥಾ ದುಸ್ಥಿತಿ..! ಅನೈತಿಕ ಚಟುವಟಿಕೆಗಳ ತಾಣವಾಗ್ತಿದೆ ಶಾಲಾ ಆವರಣ

ತುಮಕೂರು ನಗರದ ಮಾರ್ಕೆಟ್‌ ಚೌಕ್‌ನಲ್ಲಿರುವ ಸರ್ಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ
ತುಮಕೂರು ನಗರದ ಮಾರ್ಕೆಟ್‌ ಚೌಕ್‌ನಲ್ಲಿರುವ ಸರ್ಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ
ತುಮಕೂರು

ತುಮಕೂರು:

ಈ ಶಾಲೆಗೆ ಹತ್ತಲ್ಲಾ, ಇಪ್ಪತ್ತಲ್ಲಾ ಬರೋಬ್ಬರಿ 164 ವರ್ಷಗಳ ಇತಿಹಾಸವಿದೆ. ಈ ಶಾಲೆಯಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಓದುತ್ತಿದ್ದು, ಈ ಶಾಲೆಯಲ್ಲಿ ಓದಿದ ಅದೆಷ್ಟೋ ಮಂದಿ ಸದ್ಯ ಉನ್ನತ ಸ್ಥಾನದಲ್ಲಿದ್ದಾರೆ. ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನೂರಾರು ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ದಾರಿದೀಪವಾಗಿರೋ ಈ ಶಾಲೆಯ ಸ್ಥಿತಿ ಮಾತ್ರ ಇದೀಗ ಹೇಳತೀರದ್ದಾಗಿದೆ.

ಸ್ಮಾರ್ಟ್‌ ಸಿಟಿ ಖ್ಯಾತಿಯ ತುಮಕೂರು ನಗರದ ಮಾರ್ಕೆಟ್‌ ಚೌಕ್‌ನಲ್ಲಿರುವ ಸರ್ಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯಿದು. ಈ ಶಾಲೆಯ ಕಟ್ಟಡವನ್ನು ನೋಡ್ತಿದ್ರೆ, ಇದು ಶಾಲೆಯೋ ಅಥವಾ ಯಾವುದೋ ಪಾಳುಬಿದ್ದ ಕಟ್ಡಡವೋ ಎನ್ನುವಂತಿದೆ. ಬಿರುಕು ಬಿಟ್ಟ ಗೋಡೆಗಳು, ಕಳಚಿ ಬಿದ್ದಿರುವ ಮೇಲ್ಚಾವಣಿ. ಈಗಲೋ, ಆಗಲೋ ಬೀಳುವಂತಿರೋ ಶಾಲಾ ಕಟ್ಟಡದಲ್ಲಿ ವಿದ್ಯಾರ್ಥಿಗಳು ಜೀವಭಯದಲ್ಲಿಯೇ ವಿದ್ಯಾಭ್ಯಾಸ ನಡೆಸುವ ಪರಿಸ್ಥಿತಿ. ಇನ್ನು ಪೋಷಕರು ಕೂಡ ತಮ್ಮ ಮಕ್ಕಳನ್ನ ಈ ಶಾಲೆಗೆ ಕಳುಹಿಸಲು ಆತಂಕ ಪಡುವಂತಾಗಿದೆ. ಜೊತೆಗೆ ಈ ಶಾಲಾ ಕಟ್ಟಡದ ಮೇಲೇಯೇ ಮರಗಳ ಕೊಂಬೆಗಳು ಹರಡಿಕೊಂಡಿರೋದ್ರಿಂದ ಮತ್ತಷ್ಟು ಭಯಪಡುವಂತಾಗಿದೆ.

ಹೇಳಿಕೊಳ್ಳೋಕೆ ಇದು ಶತಮಾನ ಕಂಡಿರೋ ಶಾಲೆಯಿದು. ಆದರೆ ಇದೀಗ ಹೇಗಾದರೂ ಮಾಡಿ ಈ ಶಾಲೆಯನ್ನು ಉಳಿಸಿಕೊಡಿ ಅಂತಾ ಅಲ್ಲಿನ ಶಿಕ್ಷಕರು ಮತ್ತು ಸ್ಥಳೀಯರು ಬೇಡಿಕೊಳ್ಳುವಂತಾಗಿದೆ. ಈ ಶಾಲೆಗೆ ಸರಿಯಾದ ಕಾಂಪೌಂಡ್‌ ವ್ಯವಸ್ಥೆಯಿಲ್ಲ, ಕಟ್ಟಡದ ಮೇಲ್ಚಾವಣಿ ಸರಿಯಿಲ್ಲ. ಗೋಡೆಗಳು ಕುಸಿದು ಬಿದ್ದಿವೆ. ಸಂಜೆಯಾದರೆ ಸಾಕು ಈ ಶಾಲೆಯ ಆವರಣ ಪುಂಡ ಪೋಕರಿಗಳ ತಾಣವಾಗಿ ಬದಲಾಗುತ್ತೆ. ಕುಡುಕರು ಇದನ್ನ ತಮ್ಮ ಅಡ್ಡಾವನ್ನಾಗಿ ಮಾಡಿಕೊಳ್ತಿದ್ದಾರೆ. ಇದರಿಂದಾಗಿ ಶಿಕ್ಷಣ ನೀಡುವ ತಾಣ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಈ ಶಾಲೆಯ ದುಸ್ಥಿತಿ ಬಗ್ಗೆ ಮತ್ತು ದುರಸ್ಥಿ ಮಾಡಿಸಿಕೊಡುವಂತೆ ಮುಖ್ಯ ಶಿಕ್ಷಕರು ಹಲವಾರು ಬಾರಿ ಶಿಕ್ಷಣ ಇಲಾಖೆಗೆ  ಅರ್ಜಿ ಬರೆದಿದ್ದು, ಸಂಬಂದಪಟ್ಟ  ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದ ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆ ಉಂಟಾಗ್ತಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಶಾಲೆಯ ಉಳಿವಿಗೆ ಪ್ರಯತ್ನಿಸಬೇಕಿದೆ.

Author:

...
Editor

ManyaSoft Admin

Ads in Post
share
No Reviews