ತುಮಕೂರು : ರಾಜ್ಯ ಪಿಂಜಾರ ಸಂಘದಿಂದ ಜಾತಿಗಣತಿ ಸಮೀಕ್ಷೆಗೆ ಸಹಕಾರ ನೀಡಲು ಮನವಿ

ತುಮಕೂರು :

ರಾಜ್ಯದಲ್ಲಿ ಸದ್ಯ ಜಾತಿಗಣತಿಯ ಸದ್ದು ಜೋರಾಗಿದೆ. ರಾಜ್ಯ ಸರ್ಕಾರ ನಡೆಸಿದ್ದ ಜಾತಿಗಣತಿ ಸಮೀಕ್ಷೆಯ ವರದಿ ಬಿಡುಗಡೆಯಾಗಿದ್ದು, ಇದನ್ನು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿಯೂ ಮಂಡಿಸಲಾಗಿದೆ. ಇನ್ನು ಜಾತಿಗಣತಿ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಪಿಂಜಾರ/ ನದಾಫ್‌ ಜನಸಂಖ್ಯೆ 1 ಲಕ್ಷದಷ್ಟಿದೆ ಅಂತಾ ಹೇಳಲಾಗಿತ್ತು. ಆದರೆ ರಾಜ್ಯದಲ್ಲಿ ಸುಮಾರು ೨೦ರಿಂದ ೨೫ ಲಕ್ಷಕ್ಕೂ ಹೆಚ್ಚು ಪಿಂಜಾರ ಜನಸಂಖ್ಯೆಯಿದ್ದು, ಸಮೀಕ್ಷೆಯಲ್ಲಿ ವ್ಯತ್ಯಾಸ ಬಂದಿರೋ ಕಾರಣ ಪಿಂಜಾರ ಸಮಾಜದ ಜಾತಿಗಣತಿಗೆ ಕರ್ನಾಟಕ ರಾಜ್ಯ ಪಿಂಜಾರ/ ನದಾಫ್‌ ಜನಾಂಗದ ಕ್ಷೇಮಾಭಿವೃದ್ಧಿ ಸಂಘ ಸಜ್ಜಾಗಿದೆ.

ಸರ್ಕಾರದ ಗಮನ ಸೆಳೆಯುವ ಸಲುವಾಗಿ ರಾಜ್ಯಾದ್ಯಂತ ಜಾತಿಗಣತಿಯನ್ನು ನಡೆಸಲು ಕಳೆದ ಎಪ್ರಿಲ್‌ 28ರಂದು ನಡೆದ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ನಿರ್ಧರಿಸಲಾಗಿದ್ದು, ಈಗಾಗಲೇ ಜಾತಿಗಣತಿ ನಡೆಸಲು ನಮೂನೆಯನ್ನು ಕೂಡ ಸಿದ್ಧಪಡಿಸಲಾಗಿದೆ. ಎಲ್ಲಾ ಪಿಂಜಾರ ಜನಾಂಗದ ಬಾಂಧವರು ಈ ನಮೂನೆಯನ್ನು ಭರ್ತಿ ಮಾಡುವ ಮೂಲಕ ಈ ಸಮೀಕ್ಷೆಗೆ ಸಹಕರಿಸುವಂತೆ ರಾಜ್ಯ ಪಿಂಜಾರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬಷೀರ್‌ ಅಹಮದ್‌ ಮನವಿ ಮಾಡಿಕೊಂಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews