ತುಮಕೂರು: ST ನಿಗಮದ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಪರಮೇಶ್ವರ್‌..!

ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆ
ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆ
ತುಮಕೂರು

ತುಮಕೂರು:

ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಗೃಹ ಸಚಿವ ಡಾ. ಜಿ. ಪರಮೇಶ್ವರ್‌.

‍ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್‌ ಅವರ ಅಧ್ಯಕ್ಷತೆಯಲ್ಲಿ ಇಂದು ತುಮಕೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತಿದ್ದು. ಸಭೆ ಆರಂಭವಾಗಿ ಮುಕ್ಕಾಲು ಗಂಟೆಯ ನಂತರ ಫೈಲ್‌ ಹಿಡಿದು ಆಗಮಿಸಿದ ಎಸ್.‌ ಟಿ ನಿಗಮ ಅಧಿಕಾರಿಗೆ ಗೃಹ ಸಚಿವರು ತರಾಟೆಗೆ ತೆಗೆದುಕೊಂಡಿದ್ದು, ST ನಿಗಮದ ಅಧಿಕಾರಿಗೆ ಡೋಂಟ್‌ ಸ್ಟ್ಯಾಂಡ್‌,  ಒಳಗಡೆ ಬರಬೇಡಿ ಗೆಟೌಟ್‌ ಎಂದಿದ್ದಾರೆ.

ಇನ್ನು ಸಭೆಗೆ ಬರುವ ಜನಪ್ರತಿನಿಧಿಗಳನ್ನು ಹೊರತುಪಡಿಸಿ ತಡವಾಗಿ ಬರುವ ಯಾವುದೇ ಅಧಿಕಾರಿಯನ್ನು ಸಭೆಯ ಒಳಗಡೆ ಬಿಡದಂತೆ ಗೃಹ ಸಚಿವ ಪರಮೇಶ್ವರ್‌ ಅವರು ಖಡಕ್ ಸೂಚನೆ ನೀಡಿದ್ದಾರೆ.

Author:

...
Editor

ManyaSoft Admin

share
No Reviews