ತುಮಕೂರು : ಶಾಲಾ ಹುಡುಗರ ನಡುವಿನ ಗಲಾಟೆ ಬಾಲಕನ ಸಾವಿನಿಂದ ಅಂತ್ಯ..?

ಮೃತ ಬಾಲಕ ಚೇತನ್‌
ಮೃತ ಬಾಲಕ ಚೇತನ್‌
ತುಮಕೂರು

ತುಮಕೂರು :

ಈ ಸಮಾಜ ಇತ್ತೀಚೆಗೆ ಎತ್ತ ಸಾಗುತ್ತಿದೆ ಅನ್ನೋದೇ ಗೊತ್ತಾಗ್ತಿಲ್ಲ. ಚಿಕ್ಕಚಿಕ್ಕ ಮಕ್ಕಳು ಕೂಡ ರೌಡಿಗಳಂತೆ ವರ್ತಿಸುತ್ತಿದ್ದಾರೆ. ಸಂಸ್ಕಾರ, ಸನ್ನಡತೆಯಿಲ್ಲದೇ ಸಮಾಜಘಾತುಕರಾಗಿ ಬದಲಾಗ್ತಿದ್ದಾರೆ. ಚೆನ್ನಾಗಿ ಓದಿ ದೇಶದ ಸತ್ಪ್ರಜೆಗಳಾಗಬೇಕಿದ್ದ ಮಕ್ಕಳು  ರೌಡಿಗಳಂತೆ ವರ್ತಿಸುತ್ತಾ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡ್ತಿದ್ದಾರೆ. ಇದೀಗ ಕಲ್ಪತರು ನಾಡು, ಶೈಕ್ಷಣಿಕ ನಗರಿ ಅಂತಾ ಕರೆಸಿಕೊಳ್ಳೋ ತುಮಕೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸದ ಸುದ್ದಿಯೊಂದು ಹೊರಬಿದ್ದಿದ್ದು, ಎಲ್ಲರನ್ನು ಬೆಚ್ಚಿಬೀಳಿಸಿದೆ.

ಅಂಬೇಡ್ಕರ್ ಜಯಂತಿಯಂದೇ ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಲಿತ ಸಮುದಾಯಕ್ಕೆ ಸೇರಿದ್ದ ಬಾಲಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಶಾಲಾ ಹುಡುಗರ ನಡುವಿನ ಗಲಾಟೆ ಈ ಬಾಲಕನ ಸಾವಿನಲ್ಲಿ ಅಂತ್ಯವಾಯಿತಾ ಅನ್ನೋ ಅನುಮಾನಗಳು ಮೂಡೋದಕ್ಕೆ ಶುರುವಾಗಿದೆ.

ತುಮಕೂರು ತಾಲೂಕಿನ ಚಿಕ್ಕತೊಟ್ಲುಕೆರೆ ಸಮೀಪದ ಕರೀಕೆರೆ ಗ್ರಾಮದಲ್ಲಿ 10ನೇ ತರಗತಿ ಓದುತ್ತಿದ್ದ ಕರೀಕೆರೆ ಗ್ರಾಮದ ವಿದ್ಯಾರ್ಥಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಕರೀಕೆರೆ ಗ್ರಾಮದ  ಎಸ್ ಸಿ ಕಾಲೋನಿಯ ಚೇತನ್ ಕುಮಾರ್ ಮೃತ ಬಾಲಕ. ಈ ಚೇತನ್ ಕುಮಾರ್ ಸಾವಿನ ಸುತ್ತ ಇದೀಗ ಅನುಮಾನದ ಹುತ್ತ ಆವರಿಸಿದೆ.

ಚಿಕ್ಕ ತೊಟ್ಲುಕೆರೆಯ ಅಟವಿ ಸಿದ್ದಲಿಂಗೇಶ್ವರ ಸಂಯುಕ್ತ ಪ್ರೌಡಶಾಲೆಯಲ್ಲಿ ಓದುತ್ತಿದ್ದ ಚೇತನ್ ಕುಮಾರ್, ಕಳೆದ ಫೆ. ೧೮ನೇ ತಾರೀಖು ಶಾಲೆಯಲ್ಲಿ ಮುಸ್ಲಿಂ ಸಮುದಾಯದ ರಿಜ್ವಾನ್ ಎಂಬ ಹುಡುಗನ ಜೊತೆ ಗಲಾಟೆ ಮಾಡಿ ಕೊಂಡಿದ್ದನಂತೆ. ನಂತರ ಇಬ್ಬರ ಪೋಷಕರನ್ನು ಕೂಡ ಶಾಲೆಗೆ ಕರೆಸಿ ಶಿಕ್ಷಕರು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಇನ್ನು ಅದೇ ದಿನ ಸಂಜೆ ಚೇತನ್ ಕುಮಾರ್ ಮನೆ ಬಳಿ ತಂದೆ ತಾಯಿ ಹಾಗೂ ಕೆಲವು ಪಡ್ಡೆ ಹುಡುಗರ ಜೊತೆ ಬಂದಿದ್ದ ರಿಜ್ವಾನ್, ನಿಮ್ಮ ಮಗನನ್ನು ಬಿಡೋದಿಲ್ಲ. ಎಕ್ಸಾಂ ಮುಗಿಯಲಿ, ರಂಜಾನ್ ಹಬ್ಬ ಮುಗಿಯಲಿ ನೋಡಿಕೊಳ್ಳುತ್ತೇನೆ ಅಂತಾ ಬೆದರಿಕೆ ಹಾಕಿ ಹೋಗಿದ್ದನಂತೆ. ಆಗ ಚೇತನ್ ಕುಮಾರ್ ಪೋಷಕರು ಕೂಡ, ಏನೋ ಇದು ಶಾಲಾ ಮಕ್ಕಳ ಗಲಾಟೆ ದೊಡ್ಡದು ಮಾಡೋದು ಬೇಡ ಅಂತೇಳಿ ರಿಜ್ವಾನ್ ಪೋಷಕರಿಗೆ ಹೇಳಿ ಕಳುಹಿಸಿದ್ದರಂತೆ. 

ಇನ್ನು ಯಾವುದೇ ತೊಂದರೆ ಇಲ್ಲದೇ ಚೇತನ್ ಕುಮಾರ್ ಶಾಲೆಗೆ ಹೋಗಿ ಬರ್ತಿದ್ದು. ಆದರೆ ಕಳೆದ ಏ.೩ರಂದು ಚೇತನ್ ಕುಮಾರ್ ಓದುತ್ತಿದ್ದ ಶಾಲೆಯ ಶಿಕ್ಷಕರು ಏಕಾಏಕಿ ಚೇತನ್ ಕುಮಾರ್ ತಂದೆ ತಾಯಿಗೆ ಕರೆ ಮಾಡಿ ನಿಮ್ಮ ಮಗನಿಗೆ ಹುಷಾರಿಲ್ಲ, ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರಂತೆ. ಕರೆ ಬಂದ ತಕ್ಷಣ ಚೇತನ್ ಕುಮಾರ್ ತಂದೆ ಶಾಲೆಗೆ ಹೋಗಿ ನೋಡಿದರೆ ಚೇತನ್ ಅಲ್ಲಿ ಇರಲಿಲ್ಲವಂತೆ. ಬಳಿಕ ಶಾಲೆಯ ಕೊಠಡಿ ಹಾಗೂ ಮೈದಾನದಲ್ಲಿ ಹುಡುಕಿದಾಗಲೂ ಚೇತನ್ ಸಿಕ್ಕಿರಲಿಲ್ಲ. ಬಳಿಕ ಚಿಕ್ಕತೊಟ್ಲುಕೆರೆ ಬಸ್ ಸ್ಟಾಂಡ್ ಗೆ ಹೋಗಿ ನೋಡಿದಾಗ ಅಲ್ಲಿಯೂ ಕೂಡ ಚೇತನ್‌ ಇರಲಿಲ್ಲ. ನಂತರ ಮತ್ತೆ ಶಾಲೆಗೆ ವಾಪಸ್ ಹೋಗಿ ನೋಡಿದಾಗ ಚೇತನ್ ಶಾಲೆಯಲ್ಲಿದ್ದ. ಆದರೆ ಆತನ ಕಾಲಿಗೆ ಗಾಯವಾಗಿತ್ತಂತೆ. ಕಾಲು ಎಳೆದುಕೊಂಡು ಓಡಾಡುತ್ತಿದ್ದನಂತೆ. ಏನಾಯ್ತು ಅಂತಾ ಕೇಳಿದರೆ ಏನನ್ನೂ ಹೇಳಿಲ್ಲ. ನಂತರ ಚೇತನ ಅನ್ನು ಕರೆದುಕೊಂಡು ಹೋಗಿದ್ದ ಪೋಷಕರು ಚಿಕ್ಕತೊಟ್ಲುಕೆರೆಯಲ್ಲಿ ಕಾಲಿಗೆ ಪಟ್ಟು ಹಾಕಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದರು. ನಂತರ ಮನೆಗೆ ಬಂದಾಗ ರಾತ್ರಿ ಕಾಲು ನೋವು ಹೆಚ್ಚಾಗಿದೆ ಹಾಗೂ ಎದೆ ಕೂಡ ನೋಯ್ತಿದೆ ಅಂತಾ ತಂದೆ ತಾಯಿ ಬಳಿ ಚೇತನ್ ಹೇಳಿಕೊಂಡಿದ್ದ. ಹೀಗಾಗಿ ಚೇತನ್‌ ಅನ್ನು ರಾಮಗೊಂಡನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ಡಾಕ್ಟರ್ ಕೇಳಿದಾಗ ಕ್ರಿಕೆಟ್ ಆಡುವಾಗ ಬಿದ್ದಿದ್ದೆ ಅಂತಾ ಹೇಳಿದ್ದ. ನಂತರ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದರು. ನಂತರ ಚೇತನ್ ನನ್ನು ಅಂಬುಲೆನ್ಸ್ ನಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್, ಎಕ್ಸರೇ, ಇಸಿಜಿ ಮಾಡಿಸಿ ಒಂದು ರಾತ್ರಿ ಅಲ್ಲೇ ದಾಖಲು ಮಾಡಲಾಗಿತ್ತು. ಬಳಿಕ ರಿಪೋರ್ಟ್ ನಲ್ಲಿ ಎಲ್ಲವೂ ನಾರ್ಮಲ್ ಇದೆ ಅಂತಾ ಡಾಕ್ಟರ್ ಹೇಳಿದರು. ಹೀಗಾಗಿ ಚೇತನ್ನನ್ನು ಪೋಷಕರು ಮನೆಗೆ ಕರೆದುಕೊಂಡು ಬಂದಿದ್ದರು.

ಏಪ್ರಿಲ್ 8ನೇ ತಾರೀಖು ಮನೆಗೆ ಬಂದ ನಂತರ ಚೇತನ್ ಗೆ ಸ್ನಾನ ಮಾಡಿಸಿ ಆಹಾರ ನೀಡಿದರು. ಇದಾದ ಬಳಿಕ ಮತ್ತೆ ತನಗೆ ತುಂಬಾ ಎದೆ ನೋವುತ್ತಿದೆ ಅಂತಾ ಚೇತನ್ ತಂದೆ ತಾಯಿ ಬಳಿ ಹೇಳಿಕೊಂಡಿದ್ದ. ಹೀಗಾಗಿ ಪೋಷಕರು ಚೇತನ್‌ ನ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ತಾಯಿಯ ಬಳಿ ಚೇತನ್ ಶಾಲೆಯಲ್ಲಿ ತನಗೆ ಯಾರೋ ಹೊಡೆದಿದ್ದರು ಅನ್ನೋ ವಿಚಾರವನ್ನು ಹೇಳಿಕೊಂಡಿದ್ದನಂತೆ. ಅಷ್ಟರಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆಯೇ ಚೇತನ್ ಕೊನೆಯುಸಿರೆಳೆದಿದ್ದ.

ಚೇತನ್ ಮೃತದೇಹವನ್ನ ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸುವ ವೇಳೆ ಸ್ನಾನ ಮಾಡಿಸುವಾಗ ಚೇತನ್ ಬೆನ್ನಿಗೆ ಹಾಗೂ ಎದೆಯ ಭಾಗಕ್ಕೆ ಏಟು ಬಿದ್ದು ಬೆನ್ನು ಪೂರ್ತಿ ಕಪ್ಪಾಗಿರುವುದು ಕಂಡುಬಂದಿತ್ತು. ಆದರೆ ಆ ನೋವಿನಲ್ಲಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಪೋಷಕರು ಅಂತ್ಯಕ್ರಿಯೆ ನೆರವೇರಿಸಿದ್ರಂತೆ. ಅಂತ್ಯಕ್ರಿಯೆಯ ಬಳಿಕ ಮಗನ ಸಾವಿನ ಬಗ್ಗೆ ಪೋಷಕರಿಗೆ ಅನುಮಾನ ಮೂಡಿತ್ತು. ಜೊತೆಗೆ ಸಾಯುವ ಮುನ್ನ ಮಗ ನನಗೆ ಶಾಲೆಯಲ್ಲಿ ತನಗೆ ಹೊಡೆದಿದ್ದಾರೆ ಅಂತಾ ಹೇಳಿದ್ದ ಮಾತು ಕೂಡ ನೆನಪಾಗಿತ್ತು. ಆದ್ದರಿಂದ  ಮಗನ ಸಾವಿನ ಬಗ್ಗೆ ನಮಗೆ ಅನುಮಾನವಿದೆ ಎಂದು ಕೋರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪೋಷಕರು ಮುಂದಾಗಿದ್ರು. ಜೊತೆಗೆ ಮನೆಯ ಮುಂದೆ ಬಂದು ನಿಮ್ಮ ಮಗನನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದ ರಿಜ್ವಾನ್ ಹಾಗೂ ಆತನ ಸಹಚರರೇ ತಮ್ಮ ಮಗನ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಪೋಷಕರು ದೂರು ನೀಡಲು ಹೋದರೆ ಕೋರ ಪೋಲಿಸರು ಎಫ್ಐಆರ್ ದಾಖಲಿಸಲು ಹಿಂದೇಟು ಹಾಕ್ತಿದ್ದಾರಂತೆ. ಯುಡಿಆರ್ ರಿಪೋರ್ಟ್ ನೀಡಿ ಪೋಷಕರನ್ನು ವಾಪಾಸ್ ಕಳುಹಿಸುತ್ತಿದ್ದಾರಂತೆ. ನಮ್ಮ ಮಗನ ಸಾವಿನ ಬಗ್ಗೆ ಅನುಮಾನ ಇದೆ ಅಂತಾ ದೂರು ಕೊಡಲು ಹೋದರೆ ದೂರು ದಾಖಲಿಸಿಕೊಳ್ಳದೆ ಯುಡಿಆರ್ ರಿಪೋರ್ಟ್ ನೀಡಿ ಕಳಿಸುತ್ತಿದ್ದಾರೆ ಅಂತಾ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಚಿತ್ರದುರ್ಗದ ಆದಿಜಾಂಬವ ಮಠದ ಶ್ರೀಗಳು ಕೂಡ ಕೋರ ಪೊಲೀಸ್ ಠಾಣೆಗೆ ಬೇಟಿಕೊಟ್ಟು ಮಾದಿಗ ಸಮುದಾಯದ ಬಾಲಕನ ಸಾವಿಗೆ ನ್ಯಾಯ ಕೊಡಿಸಬೇಕು . ಕೂಡಲೇ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಚೇತನ್ ಮೃತಪಟ್ಟ ದಿನವೇ ರಿಜ್ವಾನ್ ಹಾಗೂ ತಂದೆತಾಯಿ ಊರು ಬಿಟ್ಟಿದ್ದಾರಂತೆ. ಇದರಿಂದ ಮೃತ ಚೇತನ್ ತಂದೆ ತಾಯಿಗೆ ಅನುಮಾನ ಹೆಚ್ಚಾಗಿದೆ. ಹೀಗಾಗಿ ನಮ್ಮ ಮಗನ ಸಾವಿಗೆ ನ್ಯಾಯ ಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಮೃತ ಬಾಲಕನ ತಂದೆತಾಯಿ ಬೇಡಿಕೊಳ್ಳುತ್ತಿದ್ದು, ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ.

ಒಟ್ಟಿನಲ್ಲಿ ಶಾಲಾ ಹುಡುಗರ ನಡುವಿನ ಗಲಾಟೆ ಬಾಲಕನ ಸಾವಿನಲ್ಲಿ ಅಂತ್ಯವಾಯ್ತಾ ಅನ್ನೋ ಅನುಮಾನ ಮೂಡ್ತಾ ಇದ್ದು, ಇನ್ನೊಂದೆಡೆ ಎಫ್ಐಆರ್ ದಾಖಲಿಸಿಕೊಳ್ಳೋದಕ್ಕೆ ಪೊಲೀಸರು ಹಿಂದೇಟು ಹಾಕ್ತಿರೋದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದಷ್ಟು ಬೇಗ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ತಂದೆತಾಯಿಯ ಅನುಮಾನಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಬೇಕಿದೆ.

Author:

...
Shabeer Pasha

Managing Director

prajashakthi tv

share
No Reviews