ತುಮಕೂರು : ಸಂತ ಸೇವಾಲಾಲ್ ಜಯಂತಿ | ಪ್ರಜಾಶಕ್ತಿ ಟಿವಿ ವರದಿಗಾರನಿಗೆ ಸನ್ಮಾನ

ಸಂತಾ ಸೇವಾಲಾಲ್‌ ಅವರ 286ನೇ ಜಯಂತಿ ಕಾರ್ಯಕ್ರಮದಲ್ಲಿ ಹಲವರಿಗೆ ಶ್ರೀ ಸೇವಾಲಾಲ್‌ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲಾಯಿತು.
ಸಂತಾ ಸೇವಾಲಾಲ್‌ ಅವರ 286ನೇ ಜಯಂತಿ ಕಾರ್ಯಕ್ರಮದಲ್ಲಿ ಹಲವರಿಗೆ ಶ್ರೀ ಸೇವಾಲಾಲ್‌ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲಾಯಿತು.
ತುಮಕೂರು

ತುಮಕೂರು:

ತುಮಕೂರಿನ ಕನ್ನಡ ಭವನದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಬಂಜಾರ ಸೇವಾಲಾಲ್ ಸೇವಾ ಸಂಘದ ವತಿಯಿಂದ ಪವಾಡ ಪುರುಷ ಸಂತಾ ಸೇವಾಲಾಲ್‌ ಅವರ 286ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಬಂಜಾರ ಸಂಘದ ಗೌರವಧ್ಯಕ್ಷ ದೇವಾನಾಯಕ್, ಕಾರ್ಯಧ್ಯಕ್ಷ ಕುಮಾರ ನಾಯಕ್, ಉಪಾಧ್ಯಕ್ಷ ಕುಬೇಂದ್ರ ನಾಯಕ್, ಯತೀಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಶಂಕರ್, ಉಪನ್ಯಾಸರಾದ ಕೃಷ್ಣನಾಯ್ಕ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.

ಈ ವೇಳೆ ಕಾರ್ಯಕ್ರಮದಲ್ಲಿ ಬಂಜಾರ ಸಮಾಜದಲ್ಲಿ ಸಾಧನೆಗೈದ 10 ತಾಲೂಕುಗಳ ಸಾಧಕರಾದ ಶ್ರೀರಾಮುಲುನಾಯಕ್, ಗಾಯತ್ರಿ ಬಾಯಿ, ಹರೀಶ್, ಶೇಷ ನಾಯಕ್, ಸುರೇಶ್, ಶಿವಣ್ಣ, ಭೂಮಿಕಾ, ಎನ್.ಮೂರ್ತಿ, ಪುಟ್ಟಮ್ಮ, ಕುಮಾರ್, ಗಂಗಾಧರ್, ಮತ್ರಾನಾಯಕ್, ಬಸವರಾಜು, ಶಿವಣ್ಣ, ರಮೇಶ್ ಅವರಿಗೆ ಶ್ರೀಸೇವಾಲಾಲ್ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶೇಷ ಅಂದರೆ ಪ್ರಜಾಶಕ್ತಿ ಟಿವಿಯ ಕೊರಟಗೆರೆ ವರದಿಗಾರರಾದ ಎನ್‌. ಮೂರ್ತಿ ಅವರಿಗೆ ಶ್ರೀಸೇವಾಲಾಲ್ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ನಿವೃತ್ತ ನ್ಯಾಯಾಧೀಶರಾದ ಗಣೇಶ್‌ ನಾಯಕ್‌ ಮಾತನಾಡಿ, ಸೇವಾಲಾಲ್ ಜಯಂತಿಗೆ ಸರ್ಕಾರ ನೀಡುವ ಭಿಕ್ಷೆಯ ಹಣ ನಮಗೇ ಬೇಡ. ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿವರ್ಗ ಮತ್ತು ಜನ ಪ್ರತಿನಿಧಿಗಳು ಗೈರಾಗಿ ಜಯಂತಿಗೆ ಅವಮಾನ ಮಾಡಿದ್ದಾರೆ. ಇಂತಹ ದುಸ್ಥಿತಿಗೆ ತಕ್ಕ ಉತ್ತರವನ್ನು ನಾವು ಶಿಕ್ಷಣದಿಂದ ನೀಡಬೇಕಿದೆ ಎಂದರು.

ತುಮಕೂರು ಉಪವಿಭಾಗ ಅಧಿಕಾರಿ ಗೌರವಗುಪ್ತ ಮಾತನಾಡಿ 18ನೇ ಶತಮಾನದಲ್ಲೇ 300ವರ್ಷದ ಹಿಂದೇ ಮೌಡ್ಯತೆಯ ವಿರುದ್ದ ಹೋರಾಟ ಮಾಡಿದ ಮಹಾನ್ ನಾಯಕ ಶ್ರೀಸಂತ ಸೇವಾಲಾಲ್ ಮಹಾರಾಜರು ನಮ್ಮ ರಾಜ್ಯದವರು ಅನ್ನುವುದೇ ನಮಗೇ ಹೆಮ್ಮೆಯ ವಿಷಯ. ಅವರ ಜೀವನದ ಆದರ್ಶವು ನಮಗೇಲ್ಲರಿಗೂ ಮಾದರಿ ಆಗಲಿ ಎಂದು ತಿಳಿಸಿದರು.

ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ನಾರಾಯಣನಾಯ್ಕ ಮಾತನಾಡಿ ಭಿಕ್ಷೆಬೇಡಿ ಕಟ್ಟಿರುವ ತುಮಕೂರು ನಗರದ ಬಂಜಾರ ಸಮುದಾಯ ಭವನದ ಉದ್ಘಾಟನೆ ಆಗದೇ ಮೂಲೆ ಗುಂಪಾಗಿದೆ. ನಾವು ನಮ್ಮ ಬಂಜಾರ ಸಮುದಾಯ ಒಗ್ಗಟ್ಟಾಗಿದ್ದರೇ ಮಾತ್ರ ನಮ್ಮ ಜನರಿಗೆ ಶಕ್ತಿ ಬರಲಿದೆ. ಈಗಾಗಲೇ ನಮ್ಮ ಸಮುದಾಯವನ್ನು ಕಾಣದ ಕೈಗಳು ತುಳಿಯುವ ಕೆಲಸ ಮಾಡ್ತಿದೆ ಎಂದು ಮನವಿ ಮಾಡಿದರು.

Author:

...
Editor

ManyaSoft Admin

Ads in Post
share
No Reviews