ತುಮಕೂರು: ದಯಾಮರಣ ಕೋರಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ..!

ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿ ಯೋಗನರಸಿಂಹ ಮೂರ್ತಿ
ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿ ಯೋಗನರಸಿಂಹ ಮೂರ್ತಿ
ತುಮಕೂರು

ತುಮಕೂರು:

ತುಮಕೂರು ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ವ್ಯಕ್ತಿಯು ದಯಾಮರಣ ಕೋರಿ ನನಗೆ ನ್ಯಾಯ ಕೊಡಿ, ಇಲ್ಲವಾದರೆ ಸಾಯಲು ಅವಕಾಶ ಕೊಡಿ ಎಂದು ಏಕಾಂಗಿಯಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ತುಮಕೂರು ನಗರದ ಎನ್‌.ಆರ್‌ ಕಾಲೋನಿ ನಿವಾಸಿ ಯೋಗ ನರಸಿಂಹಮೂರ್ತಿಗೆ ಪೊಲೀಸ್‌ ಅಧಿಕಾರಿಯೊಬ್ಬರು ಸುಮಾರು ಒಂದು ಕೋಟಿಯಷ್ಟು ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡ್ತಿದ್ದಾರೆ. ಈ ಬಗ್ಗೆ ಸಿಎಂ, ಡಿಸಿಎಂ, ರಾಜ್ಯಪಾಲರು, ಕಮಿಷನರ್‌ಗೆ ಪತ್ರ ಬರೆದಿದ್ದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ದಯಾಮರಣ ಕೋರಿ ಡಿಸಿಗೆ ಮೂರು ದಿನಗಳ ಹಿಂದೆ ಪತ್ರ ಬರೆದಿದ್ದೆ. ಇನ್ನು ಮೂರು ದಿನಗಳಲ್ಲಿ ಪರಿಹಾರ ಮಾಡುವುದಾಗಿ ಅಡಿಷನಲ್‌ ಎಸ್‌ಪಿ ಹೇಳಿದ್ದರೂ ಕೂಡ ಯಾವುದೇ ಆಕ್ಷನ್‌ ಆಗಿಲ್ಲ ಎಂದು ಡಿಸಿ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಲ್ಲಿಕಾರ್ಜುನ್‌ ಎಂಬ ಸಿಐಡಿ ಪೊಲೀಸ್‌ ಅಧಿಕಾರಿಯೊಬ್ಬರು ಒಂದು ಪರ್ಸೆಂಟ್‌ ಅಲ್ಲಿ 40 ಲಕ್ಷ ಲೋನ್‌ ಮಾಡಿಸುವುದಾಗಿ ನನ್ನ ಬಳಿಯಿಂದ ಸಾಕಷ್ಟು ಹಣ ಪಡೆದಿದ್ದರು. ಅಲ್ಲದೇ ಚಿನ್ನವನ್ನು ಕೂಡ ಅವರಿಗೆ ಕೊಟ್ಟಿದ್ದೆ, ಇಷ್ಟಲ್ಲದೇ ನನ್ನ ಹೆಸರಲ್ಲಿ ಕಾರು ತೆಗೆದುಕೊಂಡು ಕಾರಿನ ಕಂತಿನ ಹಣವನ್ನು ನಾನೇ ಕಟ್ಟುತ್ತಿದ್ದೆ. ಆದರೆ ಅವರು ನನಗೆ ವಂಚನೆ ಮಾಡಿದ್ದು, ನನ್ನ ಕುಟುಂಬ ಬೀದಿಗೆ ಬಿದ್ದಿದೆ. ಕೂಡಲೇ ನನಗೆ ನ್ಯಾಯ ಕೊಡಿಸಬೇಕು ಇಲ್ಲವಾದರೆ, ನನಗೆ ಸಾಯಲು ಪರ್ಮಿಷನ್‌ ಬೇಕು ಎಂದು ಯೋಗನರಸಿಂಹಮೂರ್ತಿ ಆಗ್ರಹಿಸಿದ್ದಾರೆ.

 

 

Author:

share
No Reviews