
SSIT ಆವರಣದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪತ್ನಿ ಕನ್ನಿಕಾ ಜೊತೆ ಪರಂ ಡ್ರಿಂಕಿಂಗ್ ವಾಟರ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.ತುಮಕೂರು
ತುಮಕೂರು:
ಗೃಹ ಸಚಿವ ಡಾ.ಜಿ ಪರಮೇಶ್ವರ್ ರಾಜಕೀಯದ ಜೊತೆಗೆ ನಾನಾ ಕ್ಷೇತ್ರದಲ್ಲೂ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ರಾಜಕೀಯದ ಜೊತೆಗೆ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ಸಲ್ಲಿಸುತ್ತಿರೋ ಡಾ.ಜಿ ಪರಮೇಶ್ವರ್ ಇಂದು ಮತ್ತೊಂದು ಉದ್ಯಮವನ್ನು ಆರಂಭಿಸುತ್ತಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೆಸರಲ್ಲಿ ಪರಂ ಡ್ರಿಂಕಿಂಗ್ ವಾಟರ್ನನ್ನು ತುಮಕೂರಿನ SSIT ಆವರಣದಲ್ಲಿ ಇಂದು ಪತ್ನಿ ಕನ್ನಿಕಾ ಜೊತೆ ಪರಮೇಶ್ವರ್ ಲೋಕಾರ್ಪಣೆಗೊಳಿಸಿದ್ದಾರೆ.
ಗೃಹ ಸಚಿವ ಮರಮೇಶ್ವರ್ ಅವರು ಈಗಾಗಲೇ ಕಲ್ಯಾಣ ಮಂಟಪ ಸೇರಿ ಹಲವು ಉದ್ಯಮಗಳನ್ನು ನಡೆಸುತ್ತಿದ್ದು, ಇದೀಗ ತಮ್ಮದೇ ಹೆಸರಿನಲ್ಲಿ ಡ್ರಿಂಕಿಂಗ್ ವಾಟರ್ ಪ್ಲಾಂಟ್ನನ್ನು ಉದ್ಘಾಟನೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಪರಮೇಶ್ವರ್, ಸಿದ್ಧಾರ್ಥ ಸಂಸ್ಥೆಯ ಪ್ರಚಾರಕ್ಕಾಗಿ ಡ್ರಿಂಕಿಂಗ್ ವಾಟರ್ ಪ್ಲಾಂಟ್ನನ್ನು ತೆರೆಯಲಾಗಿದೆ. ಈ ಉದ್ಯಮದಲ್ಲಿ ಹಣವನ್ನು ಗಳಿಸುವ ಉದ್ದೇಶ ಇಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ. ಅಲ್ಲದೇ ಇನ್ನು ಹಲವು ಉದ್ಯಮಗಳನ್ನು ಆರಂಭಿಸುವ ಯೋಚನೆ ಇದ್ದು, ಮುಂದಿನ ದಿನಗಳಲ್ಲಿ ಅದು ಕೂಡ ಸಕ್ರಿಯವಾಗಲಿದೆ ಎಂದು ಹೇಳಿದರು.