ತುಮಕೂರು :
ಇಂದು ದೇಶಾದ್ಯಂತ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇತ್ತ ತುಮಕೂರಿನಲ್ಲೂ ಇಂದು ಜೈನ ಸಮುದಾಯದ ಮುಖಂಡರು ಅದ್ಧೂರಿಯಾಗಿ ಮಹಾವೀರ ಜಯಂತಿಯನ್ನು ಆಚರಣೆ ಮಾಡ್ತಿದ್ದಾರೆ. ಮಹಾವೀರ ಜಯಂತಿ ಅಂಗವಾಗಿ ಭಗವಾನ್ ಮಹಾವೀರ ಮೂರ್ತಿಯನ್ನು ನಗರದ ಡಿಸಿ ಬಂಗಲೆ ಬಳಿಯ ಜೈನ ಮಂದಿರದಿಂದ ಮಹಾವೀರ ಭವನದವರೆಗೆ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಇನ್ನು ಮಹಾವೀರ ಮೂರ್ತಿಯನ್ನು ಮೆರವಣಿಗೆಗೆ ನಾಸಿಕ್ ಡೋಲ್, ಕಂಸಾಳೆ ಸೇರಿ ಕಲಾತಂಡಗಳು ಮೆರಗು ತಂದಿದ್ದು. ಮೆರವಣಿಗೆ ಜೊತೆ ನೂರಾರು ಮಂದಿ ಜೈನ ಮುಖಂಡರು ಸಾಗಿದರು. ನಗರದ ಡಿಸಿ ಕಚೇರಿ ಬಳಿ ಮಹಾವೀರ ಮೂರ್ತಿಗೆ ಭಕ್ತರು ಜಾತಿ- ಧರ್ಮ ಬೇಧ ತೋರದೆ ಕೈ ಮುಗಿದು ಪ್ರಾರ್ಥಿಸಿದರು. ಅಲ್ಲದೇ ಡಿಸಿ ಕಚೇರಿ ಬಳಿ ಭಕ್ತರಿಗೆ ನೀರು, ಮಜ್ಜಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.