ತುಮಕೂರು ಮಹಾನಗರ ಪಾಲಿಕೆತುಮಕೂರು
ತುಮಕೂರು : ಮಹಾನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯನ್ನು ಕರೆಯಲಾಗಿತ್ತು. ಆದರೆ ಸಭೆಗೆ ಮಹಾನಗರ ಪಾಲಿಕೆ ಆಯುಕ್ತರಾಗಲಿ, ಆರೋಗ್ಯ ಅಧಿಕಾರಿಗಳಾಗಲಿ, ಉಪ ಆಯುಕ್ತರಾಗಲಿ ಯಾರು ಹಾಜರಾಗದೇ ಬೇಜವಾವ್ದಾರಿ ಮೆರೆದಿದ್ದು, ದಲಿತ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಇಂದು ತುಮಕೂರು ಮಹಾನಗರ ವ್ಯಾಪ್ತಿಗೆ ಬರುವ ವಾರ್ಡ್ ನಂಬರ್ 1 ರಿಂದ 35 ವಾರ್ಡ್‌ನ ಕಾಲೋನಿಗಳಲ್ಲಿ ವಾಸಿಸುವವರಿಗೆ ನಿವೇಶನ, ಕಟ್ಟಡಗಳಿಗೆ ಆಸ್ತಿ ಸಂಖ್ಯೆ ನಮೂದಿಸಲು ಸರಳ ಖಾತಾ ಆಂದೋಲನದ ಬಗ್ಗೆ ಚರ್ಚಿಸಲು ಬೆಳಗ್ಗೆ 11 ಗಂಟೆಗೆ ಸಭೆಯನ್ನು ಕರೆಯಲಾಗಿತ್ತು. ಆದರೆ ಸಭೆಯನ್ನು ಕರೆದಿದ್ದ ಪಾಲಿಕೆ ಆಯುಕ್ತರೇ ಗೈರಾಗಿದ್ರು, ಅಲ್ಲದೇ ಆರೋಗ್ಯ ಅಧಿಕಾರಿ, ಉಪ ಆಯುಕ್ತರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳೂ ಕೂಡ ಸಭೆಗೆ ಬಂದಿರಲಿಲ್ಲ, ಹೀಗಾಗಿ ಬೇಸತ್ತ ದಲಿತ ಮುಖಂಡರು ಸಭೆಯನ್ನು ಬಹಿಷ್ಕರಿಸಿ, ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಸಭೆಯನ್ನು ಬಹಿಷ್ಕರಿಸಿ, ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದ ದಲಿತ ಮುಖಂಡರು, ಕಾಟಚಾರಕ್ಕೆ ದಲಿತ ಮುಖಂಡರ ಸಭೆಯನ್ನು ಕರೆದಿದ್ದಾರೆ, ಪಾಲಿಕೆ ಅಧಿಕಾರಿಗಳು ದಲಿತ ವಿರೋಧಿ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.