ತುಮಕೂರು : ಕಲ್ಪತರು ನಾಡಿನಲ್ಲಿ ಚಿಪ್ಪಿಗೆ ಫುಲ್ ಡಿಮ್ಯಾಂಡ್ ‌

ತುಮಕೂರು :

ತುಮಕೂರು ಹೇಳಿ ಕೇಳಿ ತೆಂಗು ಬೆಳೆಗೆ ಫುಲ್‌ ಫೇಮಸ್‌. ಆದರೆ ಜಿಲ್ಲೆಯಲ್ಲೇ ಎಳನೀರು, ತೆಂಗಿನ ಕಾಯಿ ಬೆಲೆ ಗಗನಕ್ಕೇರಿದೆ. ಅಷ್ಟೇ ಅಲ್ಲ ತೆಂಗಿನ ಕಾಯಿ, ಕೊಬ್ಬರಿ ತೆಗೆದು ಬಿಸಾಡುವ ಚಿಪ್ಪಿಗೂ ದಾಖಲೆಯ ಬೆಲೆ ಸಿಕ್ಕಿದ್ದು, ಚಿಪ್ಪಿಗೆ ಫುಲ್‌ ಡಿಮ್ಯಾಂಡ್‌ ಆಗಿದೆ. ಒಂದು ಟನ್‌ ತೆಂಗಿನ ಕಾಯಿ ಚಿಪ್ಪಿಗೆ ಸುಮಾರು 28 ಸಾವಿರ ರೂಪಾಯಿಗೆ ಮಾರಾಟವಾಗ್ತಾ ಇದೆ. ನಗರದಲ್ಲಿ ಎಳನೀರು ಸುಮಾರು 50 ರಿಂದ 80 ರೂಪಾಯಿಗೆ ಮಾರಾಟ ಆಗ್ತಾ ಇದ್ದರೆ, ಒಂದು ತೆಂಗಿನ ಕಾಯಿ ಬೆಲೆ 40 ರೂಪಾಯಿ ಇದೆ. ಇತ್ತೀಚಿಗೆ ಕಲ್ಲಿದ್ದಲು ಉತ್ಪಾದನೆ ಕಡಿಮೆ ಆಗ್ತಿದೆ. ಹೀಗಾಗಿ ಬೇಡವಾದ ಚಿಪ್ಪಿನಿಂದ ಕಲ್ಲಿದ್ದಲು ತಯಾರು ಮಾಡ್ತಾ ಇದ್ದು, ಚಿಪ್ಪಿಗೆ ಫುಲ್‌ ಡಿಮ್ಯಾಂಡ್‌ ಆಗಿದೆ.

ಇನ್ನು ಕಳೆದ  ವರ್ಷ ಒಂದು ಟನ್‌ ಚಿಪ್ಪಿಗೆ 7 ಸಾವಿರದಿಂದ 8 ಸಾವಿರ ಬೆಲೆ ಇದ್ದರೆ, ಎರಡು ವರ್ಷದ ಹಿಂದೆ ಟನ್‌ ಚಿಪ್ಪಿಗೆ 18 ಸಾವಿರ ದಾಟಿತ್ತು. ಇದೀಗ ಟನ್‌ ಚಿಪ್ಪಿಗೆ 28 ಸಾವಿರ ಗಡಿ ದಾಟಿದೆ. ಒಂದು ವರ್ಷದ ಅಂತರದಲ್ಲಿ ಬರೋಬ್ಬರಿ ನಾಲ್ಕು ಬಾರಿ ಚಿಪ್ಪಿನ ದರ  ಹೆಚ್ಚಾಗಿ ಹೊಸ ದಾಖಲೆಯನ್ನೇ ಬರೆದಿದೆ. ಚಿಪ್ಪಿಗೆ ಡಿಮ್ಯಾಂಡ್‌ ಆಗ್ತಾ ಇದ್ದಂತೆ ನಗರದ ಬೀದಿಗಳಲ್ಲಿ ಮನೆ ಮುಂದೆಯೇ ಆಟೋ, ಟ್ರ್ಯಾಕ್ಟರ್‌ಗಳಲ್ಲಿ ಬಂದು ಒಂದು ಚಿಪ್ಪಿಗೆ ಒಂದು ರೂಪಾಯಿಯಂತೆ ಕೊಂಡುಕೊಂಡು ಹೋಗ್ತಾ ಇದ್ದು, ಜನರಂಥೂ ಮನೆಯಲ್ಲಿ ಸಂಗ್ರಹಿಸಿದ್ದ ಚಿಪ್ಪನ್ನು ಮಾರಾಟ ಮಾಡಿ ದುಡ್ಡು ಮಾಡಿಕೊಳ್ತಾ ಇದ್ದಾರೆ.

ಬೇಡಿಕೆಗೆ ತಕ್ಕಂತೆ ಚಿಪ್ಪು ಸಿಗದಿರುವ ಕಾರಣ ಚಿಪ್ಪಿನ ಬೆಲೆ ದಿಢೀರ್‌ ಏರಿಕೆ ಆಗಿದೆ. ಬಿಸಿಲಿನ ತಾಪಕ್ಕೆ ಜನರು ಎಳನೀರಿನ ಮೊರೆ ಹೋಗ್ತಾರೆ. ಹೀಗಾಗಿ ರೈತರು ಕೂಡ ತೆಂಗಿನ ಕಾಯಿಗಿಂತ ಎಳನೀರು ಮಾರಾಟ ಮಾಡಲು ಮುಂದಾಗ್ತಾರೆ. ಆದ್ದರಿಂದ ಕೊಬ್ಬರಿ ಮಾರಾಟ ಕಡಿಮೆ ಆಗಿ ಚಿಪ್ಪಿನ ಕೊರತೆ ಉಂಟಾಗಿದೆ. ಚಿಪ್ಪಿಗೆ ಡಿಮ್ಯಾಂಡ್ ಹೆಚ್ಚಾಗ್ತಾ ಇದ್ದಂತೆ ಬೆಲೆ ಕೂಡ ಕಾಮನ್‌ ಆಗಿ ಹೆಚ್ಚಾಗಿದೆ ಎಂದು ಚಿಪ್ಪುನ್ನು ಕೊಂಡು ಇದ್ದಿಲು ಮಾಡುತ್ತಿರುವ ಮಾಲೀಕ ನವೀನ್‌ ಹೇಳಿದರು.

ಅದೇನೆ ಆಗಲಿ ಕಸ ಅಂತಾ ಎಸೆಯುತ್ತಿದ್ದ ಚಿಪ್ಪಿಗೆ ಇಷ್ಟು ಬೆಲೆ ಸಿಕ್ಕಿರೋದು ಒಂದು ರೀತಿ ಅಚ್ಚರಿ, ಆಶ್ಚರ್ಯವೇ ಸೃಷ್ಟಿಯಾಗಿದೆ. 

Author:

...
Kusuma V

Chief Executive Officer

prajashakthi tv

share
No Reviews