ತುಮಕೂರು : ತುಮಕೂರಿನ ಅಬಕಾರಿ ಇಲಾಖೆ ಅಧಿಕಾರಿಗಳೇ ಎಲ್ಲಿದ್ದೀರಿ… ನಿಮ್ಮ ವ್ಯಾಪ್ತಿಗೆ ಬರುವ ಕ್ಷೇತ್ರಗಳಲ್ಲಿ ಬಾರ್‌ಗಳ ಮಾಲೀಕರು ರೂಲ್ಸ್ ಫಾಲೋ ಮಾಡ್ತೀದ್ದೀರಾ..? ಚೆಕ್ ಮಾಡಿಕೊಳ್ಳಿ… ಬಾರ್ ಅಂಡ್ ರೆಸ್ಟೊರೆಂಟ್‌ಗಳಿಗೆ ಕೆಲವೊಂದು ನಿಯಮ ಇರುತ್ತೆ,,, ಅದ್ರಲ್ಲಿ ಬೆಳಗ್ಗೆ 10 ಗಂಟೆ ಮೇಲೆ ಬಾರ್ ಓಪನ್ ಮಾಡಬೇಕು ಅನ್ನೋದು ಪ್ರಮುಖ ರೂಲ್ಸ್ ಇರುತ್ತೆ. ಆದರೆ ಇಲ್ಲೊಂದು ಬಾರ್ ಮಾತ್ರ ಬೆಳಗ್ಗೆ ಆಗ್ತಾ ಇದ್ದಂಗೆ ಬಾರ್ ಓಪನ್ ಮಾಡಿ, ಮದ್ಯ ಮಾರಾಟಕ್ಕೆ ನಿಂತಿದ್ದಾರೆ. ಹೌದು ಬೆಳ್ಳಂ ಬೆಳಗ್ಗೆ ಅಂದ್ರೆ ಕಾಫಿ, ಟೀ ಕುಡಿಯೋ ಟೈಂ ಅಲ್ಲೇ ಬಾರ್ ಓಪನ್ ಮಾಡಿ ಎಣ್ಣೆ ಸೇಲ್ ಮಾಡ್ತಾ ಇದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರಾ ಎಂಬ ಅನುಮಾನ ಮೂಡಿದೆ.
ಹೆಬ್ಬೂರು ಅದು ಹೇಳಿ ಕೇಳಿ ಹೋಬಳಿ. ನಿತ್ಯ ಸುತ್ತಮುತ್ತಲ ಗ್ರಾಮಸ್ಥರು, ಶಾಲಾ- ಕಾಲೇಜು ಮಕ್ಕಳು ಬರ್ತಾ ಇರ್ತಾರೆ. ಆದರೆ ಇಲ್ಲಿನ ಗಾಯತ್ರಿ ವೈನ್ಸ್ ಹಾಗೂ ಗಾಯತ್ರಿ ಡಿಲಕ್ಸ್ ಬಾರ್ ಅಂಡ್ ರೆಸ್ಟೊರೆಂಟ್ ಮಾತ್ರ ರೂಲ್ಸ್ ಬ್ರೇಕ್ ಮಾಡಿ ಬೆಳಗ್ಗೆಯೇ ಓಪನ್ ಮಾಡಿ ರಾಜಾರೋಷವಾಗಿ ಎಣ್ಣೆ ಸೇಲ್ ಮಾಡ್ತಿದ್ದಾರೆ. ಎಣ್ಣೆ ಸಿಗುತ್ತೆ ಅಂತಾ ಗೊತ್ತಾಗಿ ಬೆಳಗ್ಗೆಯೇ ವೈನ್ಸ್ ಹಾಗೂ ಬಾರ್‌ಗಳತ್ತ ಮುಖ ಮಾಡಿ ಕುಡುಕರು ಎಣ್ಣೆ ಕುಡಿಯೋದು ಪ್ರಜಾಶಕ್ತಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಹೆಬ್ಬೂರಿನಲ್ಲಿ ರೂಲ್ಸ್ ಬ್ರೇಕ್ ಮಾಡಿ ಬಾರ್ ಓಪನ್ ಮಾಡ್ತಾ ಇದ್ದಾರೆ ಅಂತಾ ವಿಚಾರ ಗೊತ್ತಾಗಿ ಪ್ರಜಾಶಕ್ತಿ ವರದಿಗಾರರು ರಿಯಾಲಿಟಿ ಚೆಕ್‌ಗೆ ಇಳಿದಿದ್ದು, ಬೆಳಗ್ಗೆ 8:32ರ ಸುಮಾರಿಗೆ ಹೆಬ್ಬೂರಿನ ಗಾಯತ್ರಿ ಡಿಲಕ್ಸ್ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಿದ್ದು, ರೂಲ್ಸ್ ಬ್ರೇಕ್ ಮಾಡಿ ಯಾಕೆ ಬಾರ್ ಓಪನ್ ಮಾಡಿದ್ದೀರಾ ಅಂತಾ ಪ್ರಶ್ನಿಸಿದ್ದಕ್ಕೆ ನಮ್ಮ ಟೈಂಗೆ ಡೈಲಿ ಓಪನ್ ಮಾಡೋದು ಅಂತಾ ಬಾರ್ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಉತ್ತರಿಸಿದ್ದು, ಅಧಿಕಾರಿಗಳೇ ಬಾರ್ ಮಾಲೀಕರ ರಕ್ಷಣೆಗೆ ಇದ್ದಾರಾ..? ಇದರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರಾ..? ಎಣ್ಣೆ ಸೇಲ್ ಆಗ್ತಾ ಇರೋ ಪಾಲಲ್ಲಿ ಅಧಿಕಾರಿಗಳಿಗೆ ಭಕ್ಷಿಕ್ ಸಿಗ್ತಾ ಇದ್ಯಾ…? ಅಥವಾ ಇಷ್ಟೆಲ್ಲಾ ನಡೆಯುತ್ತಿದ್ರು ಅಧಿಕಾರಿಗಳಿಗೆ ಇದ್ಯಾವುದು ಗೊತ್ತೇ ಇಲ್ವಾ….? ಎಂಬ ಅನುಮಾನ ಕಾಡುತ್ತಿದೆ.
ಇನ್ನು ಈ ರೂಲ್ಸ್ ಬ್ರೇಕ್ ಮಾಡಿರೋ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಹೆಬ್ಬೂರು ಪೊಲೀಸ್ ಠಾಣೆಯ ಸಮೀಪದಲ್ಲೇ ಇದ್ದು, ನಿತ್ಯ ಬೆಳಗ್ಗೆ ಬಾರ್ ಓಪನ್ ಮಾಡ್ತಾ ಇದ್ರು ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರಾ..? ಎಂಬ ಹತ್ತಾರು ಅನುಮಾನ ಕೂಡ ಕಾಡ್ತಿದೆ.
ಅದೇನೆ ಆಗಲಿ ಬೆಳ್ಳಂ ಬೆಳಗ್ಗೆ ಬಾರ್‌ಗಳನ್ನು ಓಪನ್ ಮಾಡಿ ಎಣ್ಣೆ ಸಫ್ಲೈ ಮಾಡ್ತಾ ಇದ್ದು, ಸಮಾಜಕ್ಕೆ ದೊಡ್ಡ ಕಂಟಕವಾಗ್ತಿದೆ. ಇನ್ನಾದ್ರು ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚೆತ್ತುಕೊಂಡು ರೂಲ್ಸ್ ಬ್ರೇಕ್ ಮಾಡ್ತಿರೋ ಬಾರ್‌ಗಳಿಗೆ ಕಡಿವಾಣ ಹಾಕಬೇಕಿದೆ.