ತುಮಕೂರು : ಒಳಮೀಸಲಾತಿ ಸರ್ವೇಗೆ ಸರ್ವರ್ ಕಾಟ... ಶಿಕ್ಷಕರ ಗೋಳು ಕೇಳೋರು ಯಾರು..?

ತುಮಕೂರು :

ಜಾತಿಗಣತಿ ಸಮೀಕ್ಷೆಯ ವಿಚಾರವಾಗಿ ರಾಜ್ಯದಲ್ಲಿ ದೊಡ್ಡ ಅವಾಂತರವೇ ಸೃಷ್ಠಿಯಾಗಿತ್ತು. ಹಲವು ಪಂಗಡದ ಮುಖಂಡರು ಸರ್ಕಾರ ನಡೆಸಿರುವ ಸಮೀಕ್ಷೆಯಲ್ಲಿ ಸತ್ಯವಿಲ್ಲ. ಇಲ್ಲಿ ಕೇವಲ ಮುಸ್ಲಿಂರನ್ನು ಓಲೈಸೋ ಕೆಲಸ ಮಾಡಲಾಗಿದೆ. ಸಮೀಕ್ಷೆಯನ್ನು ಮತ್ತೊಮ್ಮೆ ಮಾಡಬೇಕು ಅಂತ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಇದೆಲ್ಲದರ ನಡುವೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ಸಮೀಕ್ಷೆಯನ್ನು ಸರ್ಕಾರ ಕೈಗೆತ್ತಿಕೊಂಡಿತ್ತು. ಆದರಂತೆ ಮೇ 5 ರಿಂದ ಒಳಮೀಸಲಾತಿ ಸಮೀಕ್ಷೆ ನಡೆಸುತ್ತಿದೆ.

ಮೇ 5 ರಂದು ಎಸ್‌ಸಿ/ಎಸ್‌ಟಿ ಒಳಮೀಸಲಾತಿಯ ಸರ್ವೆ ಕಾರ್ಯ ಪ್ರಾರಂಭವಾಗಿದ್ದು, ಈ ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯುತ್ತಿದೆ. ದಲಿತ ಉಪಜಾತಿಗಳ ಸಾಮಾಜಿಕ ಸ್ಥಿತಿ, ಶಿಕ್ಷಣ, ಉದ್ಯೋಗ ಮತ್ತು ಅನ್ಯಾಯದ ಮಟ್ಟವನ್ನು ಅಳೆಯುವ ಗುರಿಯೊಂದಿಗೆ ಕೈಗೆತ್ತಿಕೊಳ್ಳಲಾಗಿದೆ. ಸಮೀಕ್ಷೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ಮೂಲಕ ನಡೆಸಲಾಗುತ್ತಿದ್ದು, ಅವರಿಗೆ ಪೂರ್ವ ತರಬೇತಿಯನ್ನು ಕೂಡ ನೀಡಲಾಗಿದೆ. ಸುಮಾರು ನೂರು ಕೋಟಿ ರೂ. ವೆಚ್ಚದಲ್ಲಿ ಈ ಮಹತ್ವದ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ಒಳಮೀಸಲಾತಿ ಸಮೀಕ್ಷೆ ಕಾರ್ಯಕ್ಕೆ ಪ್ರಾರಂಭದಲ್ಲಿಯೇ ಸರ್ವರ್‌ ವಿಘ್ನ ಕಾಡುತ್ತಿದೆ.

ಸಮೀಕ್ಷೆಯನ್ನು ಸರ್ಕಾರ ಸೂಚಿಸಿರುವ ಮೊಬೈಲ್‌ ಆಪ್‌ನಲ್ಲಿಯೇ ಶಿಕ್ಷಕರು ಸರ್ವೆ ಮಾಡಬೇಕು. ಆದರೆ ಸಮೀಕ್ಷೆ ಆರಂಭವಾಗುತ್ತಿದ್ದಂತೆ ತಾಂತ್ರಿಕ ಅಡ್ಡಿ ಎದುರಾಗಿದೆ. ಆನ್‌ ಲೈನ್‌ ಸರ್ವೆ ಮಾಡಲು ಶಿಕ್ಷಕರೇನೋ ಮನೆ ಮನೆಗೆ ಬೆಳಗ್ಗೆಯೇ ತೆರಳಿದ್ದಾರೆ. ಆದರೆ ಅಲ್ಲಿ ಹೋಗಿ ಕುಟುಂಬವನ್ನು ಮಾತನಾಡಿಸಿ ಎಂಟ್ರಿ ಮಾಡೋ ಟೈಮ್‌ ನಲ್ಲಿ ಸರ್ವರ್‌ ಬಿಸಿ, ಸ್ಲೋ ಅಥವಾ ಲಭ್ಯವಿಲ್ಲ ಅನ್ನೋ ಸಂದೇಶ ಬರುತ್ತೆ. "ಪುನಃ ಪ್ರಯತ್ನಿಸಿ", "ಸರ್ವರ್ ಲಭ್ಯವಿಲ್ಲ" ಎಂಬ ಸಂದೇಶಗಳಿಂದ ಶಿಕ್ಷಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಶಿಕ್ಷಕರಿಗೆ ಸರ್ವರ್‌ ಬಿಜಿ ಅನ್ನೋ ತಲೆನೋವು ಒಂದು ಕಡೆಯಾದರೆ, ಪೇಜ್‌ಗಟ್ಟಲೆ ಫಿಲ್‌ ಮಾಡೋ ಒತ್ತಡ ಮತ್ತೊಂದು ಕಡೆ. ಒಂದು ಮನೆಗೆ ಭೇಟಿ ಕೊಟ್ಟು ಸರ್ವೆ ಮಾಡೋಕೆ ಮುಂದಾದರೆ ಸಾಕು ಶಿಕ್ಷಕನ ಕಥೆ ಮುಗಿತು. ಯಾಕೆಂದರೆ ಒಂದು ಪೇಜ್‌ ಎಂಟ್ರಿ ಆದ ಮೇಲೆ ಮತ್ತೊಂದು ಪೇಜ್‌ ಎಂಟ್ರಿ ಮಾಡಬೇಕಂತೆ. ಅಷ್ಟು ಪೇಜ್‌ ಎಂಟ್ರಿ ಮಾಡಿದ ಮೇಲೆ ಫೈನಲ್‌ ಓಕೆ ಬಟನ್‌ ಕೊಟ್ಟ ಮೇಲೆ ಕೆಲವೊಮ್ಮೆ ಸರ್ವರ್‌ ಬಿಜಿ ಅಂತ ಬರುತ್ತಂತೆ. ಇದರಿಂದ ಶಿಕ್ಷಕರು ಅಷ್ಟೊತ್ತು ಮಾಡಿದ ಕೆಲಸ ಹಾಳಾಗುತ್ತೆ. 

ಗ್ರಾಮೀಣ ಭಾಗದಲ್ಲಿ ಈ ಸರ್ವರ್‌ ಸಮಸ್ಯೆ ಅಷ್ಟಾಗಿ ಕಂಡುಬಂದಿಲ್ಲ ಎನ್ನಲಾಗ್ತಿದೆ. ನಗರ ಭಾಗದಲ್ಲಿಯೇ ಈ ಸರ್ವರ್‌ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಇನ್ನು ತುಮಕೂರಿನಲ್ಲಿ ಪರಿಸ್ಥಿತಿಯನ್ನು ಹೇಳೋದಾದರೆ ನಿನ್ನೆ ಸರ್ವರ್‌ ಪ್ರಾಬ್ಲಮ್‌ ಹೆಚ್ಚಾಗಿಯೇ ಇತ್ತು. ಸರ್ವೆ ಮಾಡೋಕೆ ಹೋದ ಶಿಕ್ಷಕರಿಗೆ ಒಂದು ಕಡೆ ಸರ್ವರ್‌ ಕೈಕೊಟ್ರೆ ಮತ್ತೊಂದು ಕಡೆ ಬಿಸಿಲಿನ ಕಾಟ. ಇದರ ಬಗ್ಗೆ ಗ್ರೂಪ್‌ನಲ್ಲಿ ತಿಳಿಸಿದರೆ ಅಧಿಕಾರಿಗಳಿಂದ ನೋ ಆನ್ಸರ್.‌ ಕೆಲ ಸಮೀಕ್ಷಾದಾರರಿಗೆ ಏರಿಯಾ ಕೊಡದೇ ಕೇವಲ ವೋಟರ್ ಲೀಸ್ಟ್ ಕೊಟ್ಟಿದ್ದು ಅವರನ್ನು ಹುಡುಕಿ ಸರ್ವೇ ಮಾಡೋದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆಯಂತೆ. ಕೊನೆಗೆ ಸಮೀಕ್ಷಾದಾರರೇ ಏರಿಯಾಗಳನ್ನು ಡಿವೈಡ್ ಮಾಡಿಕೊಂಡು ಸಮೀಕ್ಷೆ ಮಾಡುವ ಸ್ಥಿತಿ ಬಂದಿದೆಯಂತೆ. ಸರ್ವರ್‌ ಸಮಸ್ಯೆ ಅಂತ ಗೊತ್ತಾದ ಮೇಲೆ ಇಂದು ಕೆಲವು ಏರಿಯಾಗಳಿಗೆ ಸೂಪರ್‌ ವೈಸರ್‌ ಭೇಟಿ ನೀಡಿ ಪರಿಶೀಲಿಸಿದ್ದಾರಂತೆ. ಇನ್ನು ಸಮೀಕ್ಷೆಯ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿದ್ದೇ ಈ ಸರ್ವರ್‌ ಸಮಸ್ಯೆ ಕಾರಣ ಎನ್ನಲಾಗ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶಿಕ್ಷಕರ ತಲೆನೋವನ್ನು ಬಗೆಹರಿಸಿ ಕೊಡಬೇಕಿದೆ.

Author:

...
Sushmitha N

Copy Editor

prajashakthi tv

share
No Reviews