ತುಮಕೂರು :
ತುಮಕೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರೋ ಜಿಲ್ಲೆ. ಸ್ಮಾರ್ಟ್ ಸಿಟಿಯಾದ ನಂತರದಿಂದ ನಮ್ಮ ನಗರ ಸ್ವಚ್ಛವಾಯ್ತು ಅನ್ನುತ್ತಿದ್ದೋರೆ ಈಗ ಮೂಗು ಮುರಿಯುತ್ತಿದ್ದಾರೆ. ಕಾರಣ ತುಮಕೂರು ಮಹಾನಗರ ಪಾಲಿಕೆಯ ಯಡವಟ್ಟು. ತುಮಕೂರಿನ ಬನಶಂಕರಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯವನ್ನು ನಿರ್ಮಿಲಾಗಿತ್ತು. ಆದರೆ ಇದುವರೆಗೂ ಅದು ಸಾರ್ವಜನಿಕರ ಬಳಕೆಗೆ ಬಾರದೆ ತುಕ್ಕು ಹಿಡಿಯುತ್ತಿದೆ. ಇಂತಹ ಯಡವಟ್ಟಿನಿಂದಾಗಿ ಸಾರ್ವಜನಿಕರ ಲಕ್ಷ ಲಕ್ಷ ಹಣ ಪೋಲಾಗುತ್ತಿರೋದು ಗ್ಯಾರಂಟಿ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನೇ ದಿನೇ ಒಂದಲ್ಲ ಒಂದು ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಎಲ್ಲಿ ನೋಡಿದರೂ ಕಸದ ರಾಶಿಯೋ ರಾಶಿ. ಇತ್ತ ಬಡಾವಣೆಗಳ ಸ್ವಚ್ಛತೆಯ ಗಮನದಲ್ಲಿಟ್ಟುಕೊಂಡು ಪ್ರಮುಖ ಬಡಾವಣೆಗಳಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಆದರೆ ಅದು ನಿರ್ಮಾಣಕ್ಕಷ್ಟೆ ಸೀಮಿತವಾಗ್ತಿವೆ ಬಿಟ್ಟರೆ ಉಪಯೋಗಕ್ಕೆ ಮಾತ್ರ ಬರ್ತಿಲ್ಲ ಅನ್ನೋದು ಶೋಚನೀಯ ಸಂಗತಿ.
ಇನ್ನು ಈ ಕುರಿತು ನಿಮ್ಮ ಪ್ರಜಾಶಕ್ತಿ ಟಿವಿಯು ನೇರವಾಗಿ ಬಡಾವಣೆಯ ಜನರನ್ನು ಶೌಚಾಲಯ ಮತ್ತು ಸ್ವಚ್ಛತೆಯ ಬಗ್ಗೆ ಕೇಳಿದರೆ ಅವರು ಕೇಳಿದರೆ ನಮ್ಮ ಬಡಾವಣೆಯಲ್ಲಿ 2014ರಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಇಲ್ಲಿವರೆಗೂ ಕೂಡ ಈ ಶೌಚಾಲಯ ಮಾತ್ರ ಓಪನ್ ಆಗಿಲ್ಲ. ಮಹಾನಗರ ಪಾಲಿಕೆಯವರು ಇತ್ತ ಗಮನ ಹರಿಸುತ್ತಿಲ್ಲ ಅಂತ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
ಏನೇ ಆಗಲಿ ಈ ರೀತಿಯಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡ್ತಿರೋದು ಸರಿಯಲ್ಲ. ಈಗಲಾದರೂ ತುಮಕೂರು ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತು. ಸಾರ್ವಜನಿಕರಿಗಾಗಿಯೇ ನಿರ್ಮಿಸಿರುವ ಶೌಚಾಲಯವನ್ನು ಕೂಡಲೇ ಬಳಕೆಗೆ ಬರುವಂತೆ ಕ್ರಮ ಕೈಗೊಳ್ಳಬೇಕಿದೆ.