ತುಮಕೂರು: ಕಸದ ತೊಟ್ಟಿಯಾದ ಆಟದ ಮೈದಾನ | ಮಾದಕ ಸೇವನೆಯ ಅಡ್ಡವಾದ ಮೈದಾನ

ಕಿತ್ತಗನಹಳ್ಳಿ ಶಾಲೆಯ ಖೋ ಖೋ ಆಟದ ಮೈದಾನ
ಕಿತ್ತಗನಹಳ್ಳಿ ಶಾಲೆಯ ಖೋ ಖೋ ಆಟದ ಮೈದಾನ
ತುಮಕೂರು

ತುಮಕೂರು:

ತುಮಕೂರು ತಾಲೂಕಿನ ಪಾಲಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಕಿತ್ತಗನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯು ಅವ್ಯವಸ್ಥೆಯಿಂದ ಕೂಡಿದ್ದು. ಶಾಲಾ ಮಕ್ಕಳಿಗೆ ಅನುಕೂಲವಾಗಲೆಂದು ಆಟದ ಮೈದಾನವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಆ ಜಾಗ ಆಟಕ್ಕೆ ಬಳಕೆ ಆಗ್ತಾ ಇಲ್ಲ, ಬದಲಾಗಿ ಕಸದ ತಿಪ್ಪೆಯಾಗಿ, ಟ್ರ್ಯಾಕ್ಟರ್‌ ನಿಲ್ಲಿಸುವ ತಾಣವಾಗಿ ಬದಲಾಗಿದೆ. ಸರ್ಕಾರಿ ಶಾಲಾ ಮಕ್ಕಳು ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಜಿಲ್ಲಾಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಲೆಂದು ಆಟದ ಮೈದಾನವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕಿತ್ತಗನಹಳ್ಳಿ ಶಾಲೆಗೆ ಸೇರಿದ ಖೋ-ಖೋ ಆಟದ ಮೈದಾನದಲ್ಲಿ ಗಿಡ ಗಂಟೆಗಳು ಬೆಳೆದು ನಿಂತಿದ್ದು, ಕಸದ ತೊಟ್ಟಿಯಾಗಿ ಪರಿಣಮಿಸಿದೆ. ಇದರಿಂದ ಮಕ್ಕಳಿಗೆ ಆಟವಾಡಲು ಸಮಸ್ಯೆ ಆಗ್ತಿದೆ. ಅಲ್ಲದೇ ಆಟದ ಮೈದಾನ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. 

ಯಾವುದೇ ಶಾಲೆಯ ಸುಮಾರು 100 ಮೀಟರ್‌ ಸುತ್ತಾ- ಮುತ್ತ ತಂಬಾಕು ಹಾಗೂ ಮಾದಕ ವಸ್ತುವನ್ನು ಮಾರಾಟ ಮಾಡಬಾರದೆಂದು ಆದೇಶ ಇದ್ದರೂ ಕೂಡ ಕಿತ್ತಗನಹಳ್ಳಿ ಶಾಲೆಗೆ ಅನ್ವಯಿಸಿಲ್ಲ , ಈ ಶಾಲೆಯ ಹತ್ತಿರದ ಅಂಗಡಿಯಲ್ಲೇ ತಂಬಾಕು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗ್ತಿದ್ದು, ಜನರು ಮಾದಕ ವಸ್ತುವನ್ನು ಖರೀದಿ ಮಾಡಿ ಹಳೆಯ ಶಾಲಾ ಕಟ್ಟಡ ಹಿಂಭಾಗದಲ್ಲಿ ಸೇವನೆ ಮಾಡುತ್ತಿದ್ದಾರೆ. 

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು ಮಕ್ಕಳಿಗಾಗಿ ಶಾಲಾ ಮೈದಾನವನ್ನು ಸ್ವಚ್ಛ ಮಾಡಿ, ಮಕ್ಕಳು ಅಟವಾಡಲು ಸಹಕಾರಿ ಮಾಡಿಕೊಡಬೇಕಿದೆ.

Author:

...
Editor

ManyaSoft Admin

Ads in Post
share
No Reviews