ತುಮಕೂರು :
2023- 24 ನೇ ಸಾಲಿನ ತುಮಕೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ತುಮಕೂರು ಜಿಲ್ಲೆಯ ಹುಳಿಯಾರಿನ ಕೆಂಕೆರೆ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ನೂರ್ ಫಾತಿಮಾ ಎಂಬುವರು ಐಚ್ಚಿಕ ಕನ್ನಡ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಹುಳಿಯಾರಿನ ಕೆಂಕೆರೆ ಗ್ರಾಮದ ಮಜೀದ್ ಸಾಬ್ ಹಾಗೂ ವಹೀದಾ ಬಾನು ಎಂಬುವರ ಪುತ್ರಿ ನೂರ್ ಫಾತಿಮಾ ಐಚ್ಚಿಕ ಕನ್ನಡ ವಿಷಯದಲ್ಲಿ ಒಟ್ಟು 1400 ಅಂಕಗಳಿಗೆ 1,345 ಅಂಕಗಳನ್ನು ಪಡೆಯುವ ಮೂಲಕ ಶೇ 96.07 ರಷ್ಟು ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಕಾಲೇಜಿನ ಶಿಕ್ಷಕ ವೃಂದದವರು ಮತ್ತು ಆಡಳಿತ ಮಂಡಳಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.