ತುಮಕೂರು : ತುಮಕೂರು ನಗರ ಶರವೇಗದಲ್ಲಿ ಅಭಿವೃದ್ಧಿ ಆಗ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗ್ತಾ ಇವೆ.. ಆದ್ರೆ ಅದು ಎಷ್ಟರ ಮಟ್ಟಿಗೆ ಕೆಲಸಗಳು ಕಾರ್ಯರೂಪಕ್ಕೆ ಬಂದಿದೆ ಅನ್ನೋದು ಒಂದು ಪ್ರಶ್ನೆಯಾಗಿದೆ. ಅಲ್ದೇ ನಗರದ ಸ್ವಚ್ಛತೆಗಾಗಿ ಪಾಲಿಕೆಗೆ ಸಾಕಷ್ಟು ಅನುದಾನ ಕೂಡ ಬರ್ತಾ ಇದೆ, ಆದ್ರೆ ಆ ಅನುದಾನ ಯಾವ ರೀತಿ ಬಳಕೆ ಆಗ್ತಿದೆ.. ಅದು ಜನ ಸಾಮಾನ್ಯರಿಗೆ ಎಷ್ಟು ಉಪಯೋಗ ಆಗ್ತಿದೆ ಅನ್ನೋದು ಮಾತ್ರ ತಿಳಿಯುತ್ತಿಲ್ಲ. ಹೌದು ನಗರದ ಬಹುತೇಕ ಪಾರ್ಕ್‌ಗಳು ಪಾಳು ಬಿದ್ದಿದ್ದು ಪಾಲಿಕೆ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಎಸಿ ರೂಂ ನಲ್ಲಿ ಕೂತು ನಾವು ಅಷ್ಟು ಅಭಿವೃದ್ಧಿ ಮಾಡಿದ್ದೀವಿ.. ಇಷ್ಟು ಅಭಿವೃದ್ಧಿ ಮಾಡಿದ್ದೀವಿ ಅಂತಾ ಬಡಾಯಿ ಕೊಚ್ಚಿಕೊಳ್ಳೋ ಪಾಲಿಕೆ ಅಧಿಕಾರಿಗಳು ಒಮ್ಮೆ ಸಿಟಿ ರೌಂಡ್ ಹಾಕಿದ್ರೆ ನಿಮಗೆ ತಿಳಿಯುತ್ತೆ ನಗರದ ಎಲ್ಲೆಲ್ಲಿ ಏನೇನು ಸಮಸ್ಯೆಗಳು ಇದೆ ಅನ್ನೋದು ತಿಳಿಯುತ್ತೆ.
ತುಮಕೂರು ನಗರದ ಶಿರಾಗೇಟ್‌ನ ಸಿಟಿ ಕ್ಲಬ್ ರಸ್ತೆಯ ಚಾಮುಂಡೇಶ್ವರಿ ನಗರದಲ್ಲಿರೋ ಪಾರ್ಕ್ ಸುಮಾರು ವರ್ಷದಿಂದ ಪಾಳು ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗ್ತಿದೆ. ಪಾರ್ಕ್‌ನಲ್ಲಿ ಗಿಡ- ಗೆಂಟೆಗಳು ಬೆಳೆದು ನಿಂತಿದ್ದು ಸಾರ್ವಜನಿಕರು ವಾಕ್ ಮಾಡಲು ಇರಲಿ, ಒಳಗೆ ಹೋಗಲು ಕೂಡ ಆಗದಂತಹ ಸ್ಥಿತಿಯಲ್ಲಿದೆ. ಗಿಡಗಳು ಬೆಳೆದು ನಿಂತಿದ್ದರಿಂದ ಸ್ಥಳೀಯರಿಗೆ ಹಾವುಗಳು ಕಾಟ ಕೂಡ ಶುರುವಾಗಿದೆಯಂತೆ.
ಇನ್ನು ಶಿರಾಗೇಟ್ ಬಳಿ ಮಾಲ್ ಓಪನ್ ಆದಾಗಿನಿಂದ ಈ ಪಾರ್ಕ್‌ನ ಅವ್ಯವಸ್ಥೆ ಮತ್ತಷ್ಟು ಹಾಳಾಗಿದ್ಯಂತೆ. ಪಾರ್ಕ್ ಸುತ್ತಮುತ್ತಲ ಮನೆಯವರು ಕಸವನ್ನು ಕೂಡ ಇಲ್ಲಿಯೇ ತಂದು ಹಾಕ್ತಾ ಇರೋದ್ರಿಂದ ಪಾರ್ಕ್ ಕಸದ ತಿಪ್ಪೆಯಾಗಿ ಮಾರ್ಪಾಡುಗೊಂಡಿದೆ. ಒಂದ್ಕಡೆ ಪಾಲಿಕೆ ನಿರ್ಲಕ್ಷ್ಯದಿಂದ ಪಾರ್ಕ್ ಹಾಳಾಗಿದ್ರೆ, ಇತ್ತ ನಿವಾಸಿಗಳು ಕೂಡ ಹಳೆಯ ಬಟ್ಟೆ, ಕಸವನ್ನು ತಂದು ಸುರಿಯೋದ್ರಿಂದ ಪಾರ್ಕ್ ಹಾಳಾಗಿ ಹೋಗಿದೆ ಎಂದು ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ರು.
ಪಾರ್ಕ್ ಹಾಳಗಲು ಒಂದ್ಕಡೆ ಪಾಲಿಕೆ ಕಾರಣ ಆದ್ರೆ ಮತ್ತೊಂದ್ಕಡೆ ನಿವಾಸಿಗಳು ಕಾರಣರಾಗಿದ್ದಾರೆ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ಆದಷ್ಟು ಬೇಗ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಬಳಸುವಂತೆ ಮಾಡಿಕೊಡಬೇಕಿದೆ. ಜೊತೆಗೆ ಜನರು ಕೂಡ ಪಾರ್ಕ್‌ನಲ್ಲಿ ಕಸವನ್ನು ಸುರಿಯೋದನ್ನ ನಿಲ್ಲಿಸಿ ಪಾರ್ಕ್‌ನನ್ನು ಉಳಿಸಬೇಕಿದೆ.