ತುಮಕೂರು :
ಇಂದಿನಿಂದ ಆರಂಭವಾಗಿರುವ ೩೪ನೇ ಸಬ್ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್‌ಗೆ ತುಮಕೂರಿನ ಬಾಲಕ ಆಯ್ಕೆಯಾಗಿದ್ದಾನೆ. ಕರ್ನಾಟಕದ ಪುರುಷ ವಿಭಾಗದ ಸಬ್ ಜೂನಿಯರ್ ತಂಡಕ್ಕೆ ಗೂಳೂರಿನ ವಡ್ಡರಹಳ್ಳಿಯ ಬಾಲಕ ಚಂದನ್ ಗೌಡ ಆಯ್ಕೆಯಾಗಿದ್ದು, ಗೆದ್ದು ಬಾ ಚಂದನ್ ಎಂದು ಆತನ ಸಹಪಾಠಿಗಳು ಶುಭಹಾರೈಸಿದ್ದಾರೆ.
ತುಮಕೂರು ತಾಲೂಕಿನ ಗೂಳೂರಿನ ಶ್ರೀ ಗಣೇಶ ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ೮ನೇ ತರಗತಿಯಲ್ಲಿ ಓದುತ್ತಿರುವ ಚಂದನ್ ಗೌಡ, ಕಬಡ್ಡಿಯಲ್ಲಿ ಉನ್ನತ ಸಾಧನೆಯನ್ನು ಮಾಡುತ್ತಿದ್ದು, ಇದೀಗ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾನೆ. ಬಿಹಾರ್ ರಾಜ್ಯದ ಗಯಾದ ರಸಲ್‌ಪುರದಲ್ಲಿ ಇಂದಿನಿಂದ ನಡೆಯುತ್ತಿರುವ ಮೂರು ದಿನಗಳ ಕಾಲ ರಾಷ್ಟ್ರೀಯ ಮಟ್ಟದ ಕಬಡ್ಡಿ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಚಂದನ್ ಗೌಡ ಅತ್ಯುತ್ತಮ ಪ್ರದರ್ಶನ ನೀಡಲಿ. ಕರ್ನಾಟಕ ತಂಡ ಚಾಂಪಿಯನ್ ಆಗಿ ಬರಲಿ ಎಂದು ಚಂದನ್ ಗೌಡ ಸಹಪಾಠಿಗಳು ಮತ್ತು ಶಿಕ್ಷಕ ವರ್ಗ ಶುಭ ಹಾರೈಸಿದೆ. ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಧನೆ ತೋರಿರುವ ಚಂದನ್ ಗೌಡಗೆ ಪ್ರಜಾಶಕ್ತಿ ಟಿವಿ ಕಡೆಯಿಂದಲೂ ಶುಭ ಹಾರೈಕೆಗಳು.