ತುಮಕೂರು :
ಕೆಲಸ ಅರಸಿ ತುಮಕೂರಿಗೆ ಬಂದವರು ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಳ್ತಿದ್ದ ಇಬ್ಬರು ಯುವಕರ ಬಾಳಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೆಟಿಎಂ ಬೈಕ್ ಸವಾರ ತಿಪ್ಪೇಸ್ವಾಮಿ ಹಾಗೂ ಹಿಂಬದಿ ಸವಾರ ಪ್ರದೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರು ನಗರದ ಅಂತರಸನಹಳ್ಳಿ ಮಾರ್ಕೆಟ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
ನಿನ್ನೆ ರಾತ್ರಿ ಊಟ ತರಲೆಂದು ಯಲ್ಲಾಪುರದಿಂದ ಶಿರಾಗೇಟ್‌ಗೆ ಬರ್ತಿದ್ದ ವೇಳೆ, ಅಂತರಸನಹಳ್ಳಿ ಮಾರ್ಕೆಟ್ ಬಳಿ ಅನಧಿಕೃತ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಲಾರಿಗೆ ಕೆಟಿಎಂ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ, ಪಾವಗಡ ಮೂಲದ ಪ್ರದೀಪ್ ಎಂಬ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ಧಾರೆ.
ಮೃತ ಯುವಕರಿಬ್ಬರು ನಗರದ ಪವನ್ ಹುಂಡಯ್ ಶೋ ರೂಂನಲ್ಲಿ ಕೆಲಸ ಮಾಡ್ತಾ ಇದ್ದು, ನಿನ್ನೆ ರಾತ್ರಿ ಮಳೆ ಬರ್ತಾ ಇದ್ದ ವೇಳೆಯೇ ಊಟ ತರಲೆಂದು ಯಲ್ಲಾಪುರದಿಂದ ಶಿರಾಗೇಟ್‌ಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಮಾರ್ಕೆಟ್ ಬಳಿ ನಿಂತಿದ್ದ ಲಾರಿಯನ್ನು ಗಮನಿಸದ ಬೈಕ್ ಸವಾರ ಗುದ್ದಿದ್ದು, ಭೀಕರ ಅಪಘಾತ ಸಂಭವಿಸಿದೆ. ಯುವಕರನ್ನು ಕಳೆದುಕೊಂಡು ಪೋಷಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಇನ್ನು ಅನಧಿಕೃತ ಪಾರ್ಕಿಂಗ್‌ನಲ್ಲಿ ಲಾರಿಯನ್ನು ಪಾರ್ಕ್ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಮಾಡ್ತಾ ಇದ್ದು, ಲಾರಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಅಲ್ಲದೇ ಅನಧಿಕೃತ ಪಾರ್ಕಿಂಗ್‌ನ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.