ತುಮಕೂರು: ಆಕಸ್ಮಿಕ ಬೆಂಕಿ | ನಾಲ್ಕು ಗುಡಿಸಲುಗಳು ಭಸ್ಮ

ಬೆಂಕಿಗಾಹುತಿಯಾಗಿರುವ ಗುಡಿಸಲುಗಳು
ಬೆಂಕಿಗಾಹುತಿಯಾಗಿರುವ ಗುಡಿಸಲುಗಳು
ತುಮಕೂರು

ತುಮಕೂರು:

ತುಮಕೂರು ಗ್ರಾಮಾಂತರದ ಹೆಬ್ಬೂರಿನ ರಾಮೇನಹಳ್ಳಿ ಗಾಮದಲ್ಲಿ ಭಾನುವಾರ ರಾತ್ರಿ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 4 ಗುಡಿಸಲುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಹೆಬ್ಬೂರಿನ ರಾಮೇನಹಳ್ಳಿಯಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದು 4 ಗುಡಿಸಲನ್ನು ನಿರ್ಮಿಸಿಕೊಂಡು, ಇಲ್ಲಿ 30 ವರ್ಷಗಳಿಂದ ವಾಸವಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅವರ 4 ಗುಡಿಸಲುಗಳು ಬೆಂಕಿಯ ಕೆನ್ನಾಲಗೆಗೆ ಹೊತ್ತಿ ಉರಿದಿದ್ದು. ಗುಡಿಸಲಿನಲ್ಲಿದ್ದ ವಸ್ತುಗಳು, ಬಟ್ಟೆ ಹಾಗೂ ದವಸ ಧಾನ್ಯಗಳು ಬೆಂಕಿಗಾಹುತಿಯಾಗಿದೆ, ಸದ್ಯ ಯಾವುದೇ ಪ್ರಾಣಾ ಹಾನಿಯಾಗಿಲ್ಲ.

ಘಟನೆ ಸಂಬಂಧ ಮಾಹಿತಿ ತಿಳಿದ ಕೂಡಲೇ ಶಾಸಕ ಸುರೇಶ್‌ ಗೌಡ ಸ್ಥಳಕ್ಕೆ ಧಾವಿಸಿ ಸಂತ್ರಸ್ತರಿಗೆ ತಕ್ಷಣದ ಆಹಾರ, ವಸ್ತ್ರ ಮತ್ತು ಪಾತ್ರೆಗಳ ಖರೀದಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೆರವು ನೀಡಿ ಸಾಂತ್ವನ ತಿಳಿಸಿದ್ದಾರೆ. ಹಾಗೂ ಸಂತ್ರಸ್ತರಿಗೆ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಸುರೇಶ್‌ ಗೌಡ ಮಾತನಾಡಿ ಅಗ್ನಿ ಶಾಮಕ ದಳದ ವಾಹನ ಘಟನಾ ಸ್ಥಳಕ್ಕೆ ಬೇಗ ಬಂದಿದ್ದರೆ ಇಷ್ಟು ಅನಾಹುತ ಆಗುತ್ತಿರಲಿಲ್ಲ ಎಂದಿದ್ದಾರೆ. ನನ್ನ ದೂರವಾಣಿ ಕರೆಗೆ ಶೀಘ್ರವಾಗಿ ಸ್ಪಂದಿಸಿದ ಜಿಲ್ಲೆಯ ಪೊಲೀಸ್‌ ವರಿಷ್ಠ ಕೆ. ವಿ ಅಶೋಕ್‌ ಅವರು ಕುಣಿಗಲ್ ನಿಂದ ವಾಹನ ತರಿಸಿ ಬೆಂಕಿ ಆರಿಸಲು ನೆರವಾದರು ಎಂದರು.

 

 

Author:

share
No Reviews