TUMAKUR : ವಿ* ಕುಡಿದು ಆಸ್ಪತ್ರೆ ಪಾಲಾಗಿದ್ದ ರೈತನ ಆರೋಗ್ಯ ವಿಚಾರಿಸಿದ ಶಾಸಕ ಜಯಚಂದ್ರ

TB JAYACHANDRA VISITS THE HOSPITAL
TB JAYACHANDRA VISITS THE HOSPITAL
ತುಮಕೂರು

ಜಮೀನು ತೆರವು ವಿರೋಧಿಸಿ ವಿ* ಸೇವಿಸಿದ್ದ ರೈತ

: ಶಿರಾನಗರಸಭೆ ವ್ಯಾಪ್ತಿಯ ಕಲ್ಲುಕೋಟೆಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಜಮೀನನ್ನು ತೆರವುಗೊಳಿಸಿ ಆಶ್ರಯ ನಿವೇಶನ ನೀಡಲು ತಾಲ್ಲೂಕು ಆಡಳಿತ ಮುಂದಾಗಿತ್ತು. ಜಮೀನು ತೆರವುಗೊಳಿಸಲೆಂದು ಅಧಿಕಾರಿಗಳು ಸ್ಥಳಕ್ಕೆ ಬಂದ ವೇಳೆಯಲ್ಲಿ ರೈತರಾದ ಲಕ್ಷ್ಮಿಕಾಂತ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ವಿರೋಧ ವ್ಯಕ್ತಪಡಿಸಿದ್ರು. ಸುಮಾರು 40 ವರ್ಷದಿಂದ ಸರ್ವೇ ನಂಬರ್ 118 ರಲ್ಲಿ  ಉಳುಮೆ ರೈತ ಉಳುಮೆ ಮಾಡುತ್ತಿದ್ದಾರೆ. ಆದ್ರೆ ಸಾಗುವಳಿ ಮಾಡುತ್ತಿದ್ದ ಜಮೀನು ನಗರಸಭೆ ವ್ಯಾಪ್ತಿಯಲ್ಲಿದ್ದು, ನಗರದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಮೀನನ್ನು 2016ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಲಾಗಿತ್ತು. ಹೀಗಾಗಿ ನೋಟಿಸ್‌ ಕೊಡದೇ ಏಕಾಏಕಿ ಸಾಗುವಳಿ ಮಾಡ್ತಿದ್ದ ಭೂಮಿಯನ್ನು ತೆರವು ಮಾಡಲು ಮುಂದಾಗಿತ್ತು. ಇದನ್ನು ವಿರೋಧಿಸಿದ ರೈತರು ತಹಶೀಲ್ದಾರ್ ಸಚ್ಚಿದಾನಂದ ಕುಚನೂರು, ಪೌರಾಯುಕ್ತ ರುದ್ರೇಶ್ ಸೇರಿದಂತೆ ಅಧಿಕಾರಿಗಳ ಮುಂದೆಯೇ ರೈತರು ವಿಷ ಸೇವಿಸಿದ್ರು.

ರೈತನ ಆರೋಗ್ಯ ವಿಚಾರಿಸಿದ ಶಾಸಕ ಟಿ.ಬಿ ಜಯಚಂದ್ರ

ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ರೈತರನ್ನು ಬೆಂಗಳೂರಿನ ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಆಸ್ಪತ್ರೆಗೆ ಶಾಸಕ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಭೇಟಿ ನೀಡಿ ವಿಷ ಸೇವನೆ ಮಾಡಿದ ಲಕ್ಷ್ಮಿಕಾಂತ್ ಅವರ ಆರೋಗ್ಯ ವಿಚಾರಿಸಿ ಶೀಘ್ರವಾಗಿ ಗುಣಮುಖವಾಗುವಂತೆ ಹಾರೈಸಿ, ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದರು. ಈ ವೇಳೆ ನಗರಸಭೆ  ಅಯುಕ್ತ ರುದ್ರೇಶ್ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರಾದ ಹಾರೋಗೇರೇ ಮಹೇಶ್ ಜಯಚಂದ್ರಗೆ ಸಾಥ್‌ ನೀಡಿದ್ರು.

ಇತ್ತ ವಿಷ ಕುಡಿದ ರೈತರ ಕುಟುಂಬಸ್ಥರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ರು. ರೈತರ ಕುಟುಂಬಸ್ಥರಿಂದ ಘಟನೆ ಬಗ್ಗೆ ಮಾಹಿತಿ ಪಡೆದ್ರು.

Author:

...
Editor

ManyaSoft Admin

Ads in Post
share
No Reviews