PAVAGADA: ಪಾವಗಡದ ಭಾಗಗಳಿಗೆ ನೀರು ಒದಗಿಸಲು ಹೋರಾಟ ಮಾಡಿದವರಿಗೆ ಸನ್ಮಾನ

ಪಾವಗಡ: 

ಪಾವಗಡ ಪಟ್ಟಣದ ರಂಗಮಂದಿರದಲ್ಲಿ ಸಮಗ್ರ ನೀರು ಹೋರಾಟ ವೇದಿಕೆ ವತಿಯಿಂದ ರೈತ ಹೋರಾಟಗಾರರಿಗೆ ಸನ್ಮಾನ ಮಾಡಲಾಯ್ತು. ನೀರಿಗೆ ಹಲವು ವರ್ಷಗಳು ಹೋರಾಟದ ತೊಡಗಿದ್ದ ಜನಪ್ರತಿನಿಧಿಗಳು, ರೈತ ಸಂಘಗಳು, ಇತರೆ ಸಂಘ ಸಂಸ್ಥೆಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗಿದ್ದು, ಮೆರವಣಿಗೆಯಲ್ಲಿ ಜಪಾನಂದ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಚಿತ್ರದುರ್ಗದ ಮಾಜಿ ಸಂಸದ ಜನಾರ್ಧನ್‌ ಸ್ವಾಮಿ,  ಸಮಗ್ರ ನೀರಿನ ಹೋರಾಟ ಸಂಘದ ಅಧ್ಯಕ್ಷ ಶಿವಪ್ರಸಾದ್, ಸೊಗಡು ವೆಂಕಟೇಶ್‌, ರೈತ ಸಂಘದ ಅಧ್ಯಕ್ಷರುಗಳಾದ  ಪೂಜರಪ್ಪ, ನರಸಿಂಹ ರೆಡ್ಡಿ ಸೇರಿ ಹಲವಾರು ಮಂದಿ ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಸುಮಾರು 250 ಮಂದಿ ಹೋರಾಟಗಾರರನ್ನು ಸನ್ಮಾನ ಮಾಡಲಾಯ್ತು.

ಈ ವೇಳೆ ಮಾತನಾಡಿದ ಇಂದಿನ ಈ ಸಂಭ್ರಮಕ್ಕೆ ಹಲವು ವರ್ಷಗಳ ನೀರಿನ ಕನಸುಗಳು ಕಾರ್ಯಕರ್ತವಾಗುತ್ತಿವೆ.   ಇಂತಹ  ಯೋಜನೆಗಳನ್ನು  ಯಾರು ನಿಲ್ಲಿಸಲು ಸಾಧ್ಯವಿಲ್ಲ .ಕರ್ನಾಟಕ ಭೂಪಟದಲ್ಲಿ ಪಾವಗಡ ಮತ್ತೆ ಕಂಗೊಳಿಸುತ್ತಿದೆ ಎಂದು ಚಿತ್ರದುರ್ಗದ ಮಾಜಿ ಸಂಸದ ಜನಾರ್ಧನ್‌ ಸ್ವಾಮಿ ಹೇಳಿದ್ರು. ನಮ್ಮ ಒಂದು ಉದ್ದೇಶ ತುಂಗಭದ್ರದಿಂದ ನೇರವಾಗಿ ಪಾವಗಡಕ್ಕೆ ಪೈಪ್ ಲೈನ್ ಮೂಲಕ ನೀರು ನೀಡುವ ಯೋಜನೆಯಾಗಿದೆ ಎಂದ್ರು.

Author:

...
Keerthana J

Copy Editor

prajashakthi tv

share
No Reviews