ಶಿರಾ :
ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದ ಉದ್ಯೋಗಿಗಳು ತಮ್ಮ ಊರಿನತ್ತ ಆಗಮಿಸಿದರು. ನಾಳೆಯಿಂದ ಎಂದಿನಂತೆ ಕೆಲಸ ಆರಂಭವಾಗಲಿದ್ದು, ಇಂದು ಸಂಜೆಯಿಂದಲೇ ಬೆಂಗಳೂರು ನಗರದತ್ತ ಪ್ರಯಾಣ ಬೆಳೆಸಿದ್ದು, ಹೀಗಾಗಿ ಟೋಲ್ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಹೌದು ಶಿರಾ ತಾಲೂಕಿನ ಕರೆಜೀವನಹಳ್ಳಿ ಬಳಿ ಇರೋ ಟೋಲ್ ಬಳಿ ಸಾಲುಗಟ್ಟಿ ವಾಹನಗಳು ನಿಂತಿದ್ದು, ಸವಾರರು ಕೆಲಕಾಲ ಪರದಾಡಿದರು.
ಮಹಾವೀರ ಜಯಂತಿ ಅಂಗವಾಗಿ ಶುಕ್ರವಾರ, ಎರಡನೇ ಶನಿವಾರ ,ಭಾನುವಾರ, ಸೋಮವಾರ ಅಂಬೇಡ್ಕರ್ ಜಯಂತಿ ಹಿನ್ನೆಲೆ ಸಾಲು ಸಾಲು ರಜೆ ಇದ್ದು, ಬೆಂಗಳೂರಿನಲ್ಲಿದ್ದ ಉದ್ಯಮಿಗಳು ಊರುಗಳತ್ತ ತೆರಳಿದರು. ಇಂದು ರಜೆ ಮುಕ್ತಾಯವಾಗಲಿದ್ದು ನಾಳೆ ಕಚೇರಿಯ ಕೆಲಸಗಳಿಗೆ ತೆರಳಲು ಊರುಗಳಿಂದ ಮತ್ತೆ ಬೆಂಗಳೂರಿಗೆ ತೆರಳುತ್ತಿದ್ದು, ಶಿರಾ- ತುಮಕೂರು ರಸ್ತೆಗಳಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಟೋಲ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸುಮಾರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದ್ದು ಜನರು ಹಿಡಿಶಾಪ ಹಾಕ್ತಿದ್ದಾರೆ.