ಗುಬ್ಬಿ : ತಾಲೂಕು ಕಚೇರಿಯಲ್ಲಿ ಶೌಚಾಲಯ ಸಮಸ್ಯೆ | ಗುಬ್ಬಿ ಶಾಸಕರೇ ಎಲ್ಲಿದ್ದೀರಾ ಸ್ವಾಮಿ?

ಗುಬ್ಬಿ : ಗುಬ್ಬಿಯ ತಾಲೂಕು ಕಚೇರಿಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯದ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ಅದು ಹೇಳಿ ಕೇಳಿ ತಾಲೂಕು ಕಚೇರಿಗೆ ಇಲ್ಲಿಗೆ ಸಾವಿರಾರು ಜನ ಹಲವು ಕೆಲಸ ಕಾರ್ಯಗಳಿಗೆ ಬರ್ತಾರೆ. ಇಂತಹ ಸಾರ್ವಜನಿಕರಿಗೆ ಶೌಚಾಲಯವನ್ನು ನಿರ್ಮಿಸಿದ್ದಾರೆ. ಆದ್ರೆ ಸರಿಯಾದ ನಿರ್ವಹಣೆ ಇಲ್ಲದೆ ಅದು ಗಬ್ಬೆದ್ದು ನಾರುತ್ತಿದೆ. ಶೌಚಾಲಯವನ್ನು ಬಳಸುವ ಜನರ ಪರದಾಡುತ್ತಿದ್ದಾರೆ. 

ಇನ್ನು ಈ ಶೌಚಾಲಯವನ್ನು ಹಿಂದೂಸ್ತಾನ್ ಹೆರೋ ನಾಟಿಕ್ಸ್ (ಎಚ್..ಎಲ್) ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ತಾಲ್ಲೋಕು ಕಛೇರಿ ಆವರಣದಲ್ಲಿ ನಿರ್ಮಿಸಲಾಗಿತ್ತು. ಆದರೆ ಇಲ್ಲಿನ ಶೌಚಾಲಯದ ನಿರ್ವಹಣೆಗಾಗಿ ವ್ಯಕ್ತಿಗಳನ್ನು ನೇಮಿಸಿಲ್ಲ.  ಕಳೆದೆರಡು ತಿಂಗಳಿಂದ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಪರಿಸ್ಥಿತಿ ಬಂದೊದಗಿದೆ. ಇಲ್ಲಿಗೆ ಬರುವ ಸಾರ್ವಜನಿರಕು ಗಬ್ಬೆದ್ದು ನಾರುತ್ತಿರುವ ಶೌಚಾಲಯವನ್ನ ಬಳಸಬೇಕಿದೆ. ಆದ್ರೆ, ಇದರ ದುರ್ನಾತಕ್ಕೆ ಕೆಲವು ಪುರುಷರು ಮೂತ್ರ ವಿಸರ್ಜನೆಗಾಗಿ ಶೌಚಾಲಯದ ಪಕ್ಕದ ಸ್ಥಳವನ್ನು ಬಳಸುತ್ತಿರುವ ದುಸ್ಥಿತಿ ಬಂದಿದೆ.

ಆದ್ರೆ. ಇಲ್ಲಿಗೆ ಬರುವ ಹೆಣ್ಣು ಮಕ್ಕಳ ಗೋಳು ಕೇಳೋರಿಲ್ಲ ಅನ್ನುವಂತಾಗಿದೆ. ಕಾರಣ ಕಚೇರಿ ಕೆಲಸಕ್ಕೆಂದು ಬರುವ ಮಹಿಳೆಯರು ಶೌಚಾಲಯವನ್ನು ಬಳಸಲು ಹೋದರೆ ಅವರಿಗೆ ದೊಡ್ಡ ಮುಜುಗರ ಕಾದಿರುತ್ತೆ. ಶೌಚಾಲಯ ಸ್ವಚ್ಛತೆಯಿಲ್ಲದ ಕಾರಣ ಕೆಲ ಪುರುಷರು ಪಕ್ಕದ ಜಾಗವನ್ನ ಬಳಸುತ್ತಿದ್ದಾರೆ. ಇದರಿಂದ ಅತ್ತ ಮಹಿಳೆಯರು ತಿರುಗಿಯೂ ಕೂಡ ನೋಡ್ತಿಲ್ಲ. ಇನ್ನ ಶೌಚಾಲಯದ ಒಳಭಾಗ ಕ್ಲೀನ್‌ ಇಲ್ಲದ ಕಾರಣ ಶೌಚಾಲಯವನ್ನು ಬಳಸೋದನ್ನೆ ನಿಲ್ಲಿಸಿದ್ದಾರಂತೆ. ಇಲ್ಲಿಗೆ ಬರುವ ಮಹಿಳೆ ಮಕ್ಕಳ ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ ಅಂತ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನು ಈ ಹಿಂದೆ ಪಟ್ಟಣ ಪಂಚಾಯಿತಿ ವತಿಯಿಂದ ಒಬ್ಬರನ್ನು ನೇಮಕ ಮಾಡಿ ಇದರ ನಿರ್ವಹಣೆಗೆ ಮುಂದಾಗಿತ್ತು ತಾಲ್ಲೋಕು ಆಡಳಿತ. ನಂತರದ ದಿನಗಳಲ್ಲಿ ಬೇರೊಬ್ಬ ಏಜೆನ್ಸಿ ನೇಮಕ ಮಾಡಿ pay and use ಎಂದು ಫಲಕ ಅಳವಡಿಸಿ ಮೂತ್ರ ವಿಸರ್ಜನೆಗೆ 2 ರೂಪಾಯಿ, ಮಲ ವಿಸರ್ಜನೆಗೆ 5 ರೂಪಾಯಿ ನಿಗಡಿ ಮಾಡಿತ್ತು. ಆದರೆ ಕೆಲವು ದಿನಗಳ ನಂತರ ಇಲ್ಲಿ ಸಿಬ್ಬಂದಿಯೇ ಕಾಣದಂತಾದರು. ಇನ್ನು ಇಲ್ಲಿ ಬೀರುತ್ತಿರುವ ದುರ್ನಾತಕ್ಕೆ ಶೌಚಾಲಯವನ್ನು ಬಳಸಲು ಕಷ್ಟಕರವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ.

 

Author:

...
Keerthana J

Copy Editor

prajashakthi tv

share
No Reviews