ತುಮಕೂರು : ತುಮಕೂರು ನಗರವು ಭಾನುವಾರ, ಮೇ 18ರಂದು ಒಂದು ಮಹತ್ವಪೂರ್ಣ ಘಟನೆಗೆ ಸಾಕ್ಷಿಯಾಗಲಿದ್ದು, “ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆ” ಬೃಹತ್ ತಿರಂಗ ಯಾತ್ರೆ ಏರ್ಪಡಿಸಲಾಗಿದೆ. ತುಮಕೂರಿನಲ್ಲಿ ಇದೇ ಮೇ. 18 ರಂದು ನಾಗರೀಕರು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ತಿರಂಗ ಯಾತ್ರೆ ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದು ತುಮಕೂರಿನಲ್ಲಿ ವಿವಿಧ ಸಂಘಟನೆಗಳಿಂದ ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಈ ವೇಳೆ ಮುಖಡರುಗಳು ಮಾತನಾಡಿ, ತಿರಂಗ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ರಕ್ಷಣೆಗಾಗಿ, ದೇಶ ಹಾಗೂ ಸೈನಿಕರನ್ನು ಬೆಂಬಲಿಸಿ ಬೃಹತ್ ತಿರಂಗ ಯಾತ್ರೆ ಮಾಡಲಾಗುತ್ತಿದೆ. ರಾಷ್ಟ್ರೀಯತೆ ಹಾಗೂ ರಾಷ್ಟ್ರದ ಸಾರ್ವಭೌಮತ್ವ, ಸೈನಿಕರ ಪರಾಕ್ರಮವನ್ನ ಮೇಳೈಸುವುದೇ ಈ ತಿರಂಗ ಯಾತ್ರೆಯ ಮುಖ್ಯ ಗುರಿಯಾಗಿದೆ. ನಗರದ ಎಸ್ಐಟಿ ಮುಂಬಾಗದಿಂದ ಪ್ರಾರಂಭವಾಗಲಿರುವ ತಿರಂಗ ಯಾತ್ರೆ. ಎಸ್ಐಟಿ, ಗಂಗೋತ್ರಿ ರಸ್ತೆ, ಎಸ್ ಎಸ್ ಪುರಂ, ಸೋಮೇಶ್ವರ, ಮೂಲಕ ಹೈಸ್ಕೂಲ್ ಮೈದಾನ ತಲುಪಿ ಅಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಇನ್ನು ಈ ತಿರಂಗ ಯಾತ್ರೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು, ವಿವಿಧ ಸಂಘಟನೆಗಳು ನಾಗರೀಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.