ಮನೆ ಮನೆ ಗಂಗೆ ಕಾಮಗಾರಿ ಭೂಮಿ ಪೂಜೆತುಮಕೂರು
ತುರುವೇಕೆರೆ :
ತುರುವೇಕೆರೆ ತಾಲೂಕಿನಲ್ಲಿ ಮತ್ತೇ ಜಲಜೀವನ್ ಮಿಷನ್ ಅಡಿಯಲ್ಲಿ ಸುಮಾರು 85 ಗ್ರಾಮಗಳಿಗೆ ಪಟ್ಟಣದ ಕೊಟ್ಟಿಗೆ ಗ್ರಾಮದಲ್ಲಿ ಸುಮಾರು 76 ಲಕ್ಷ ವೆಚ್ಚದಲ್ಲಿ ಮನೆ ಮನೆ ಗಂಗೆ ಕಾಮಗಾರಿಗೆ ಶಾಸಕ ಎಂ.ಟಿ. ಕೃಷ್ಣಪ್ಪ ಭೂಮಿ ಪೂಜೆಯನ್ನು ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿದ ಬಳಿಕ ಶಾಸಕ ಎಂ ಟಿ ಕೃಷ್ಣಪ್ಪ ರವರು ಮಾತನಾಡಿ ತಾಲೂಕಿನ ದಂಡಿನಶಿವರ ಹೋಬಳಿ ತೋವಿನಕೆರೆಗೆ 26 ಲಕ್ಷ , ಹಾಗೂ ಕಸಬಾ ಹೋಬಳಿಯ ಬಲಮಾದಿಹಳ್ಳಿಗೆ 25 ಲಕ್ಷ ಹಣ ಮುಂಜೂರು ಮಾಡಿದ್ದು ಕಾಮಗಾರಿ ನಡೆಯುತ್ತಿದೆ , ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು , ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್, ಸದಸ್ಯ ದೇವರಾಜು , ಗುತ್ತಿಗೆದಾರ ತ್ಯಾಗರಾಜು, ಮುಖಂಡರಾದ ಶ್ರೀನಿವಾಸ್, ಜವರಪ್ಪ, ತಿಮ್ಮಯ್ಯ, ಬಸವರಾಜು, ರಾಜೇಗೌಡ, ಮಂಜಯ್ಯ, ಇಂಜಿನಿಯರ್ ರವಿಕುಮಾರ್, ತುಳಸಿ ಸೇರಿದಂತೆ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.