ರಾಮನಗರ : ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರ ಸಾವು..!

ರಾಮನಗರ : ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯದಲ್ಲಿ ನಡೆದಿದೆ. ಬೆಂಗಳೂರು ಮೂಲದ ರಾಘವಿ (18), ಮಧುಮಿತ (20) ಮತ್ತು ರಮ್ಯಾ (22) ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ.

ಸಂಬಂಧಿಕರ ಮನೆಗೆ ಬಂದಿದ್ದ ಏಳು ಮಂದಿ ಯುವತಿಯರು ವೈಜಿ ಗುಡ್ಡ ಜಲಾಶಯ ನೋಡಲು ತೆರಳಿದ್ದರು, ಈ ವೇಳೆ ಓರ್ವ ಯುವತಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಅವಳನ್ನು ರಕ್ಷಿಸಲು ಉಳಿದವರು ಧಾವಿಸಿದ್ದಾರೆ, ಆದ್ರೆ ಕಾಲು ಜಾರಿ ಎಲ್ಲರು ನೀರಿಗೆ ಬಿದ್ದಿದ್ದಾರೆ. ಇವರಲ್ಲಿ ಮೂವರು ಸಾವನ್ನಪಿದರೆ, ಉಳಿದವರನ್ನು ಯುವಕನೋರ್ವ ರಕ್ಷಿಸಿದ್ದಾನೆ. ಸದ್ಯ ಮೃತದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ

ವಿಷಯ ತಿಳಿದು ಮಾಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews