ಮೈಸೂರು :
ಯುಗಾದಿ ಹಬ್ಬದ ಹಿನ್ನೆಲೆ ಕೆರೆಯಲ್ಲಿ ಹಸುಗಳನ್ನು ತೊಳೆಯಲು ಹೋಗಿದ್ದ ವೇಳೆ ಈಜು ಬಾರದೇ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಮಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಮಳ್ಳಿಯ ನಿವಾಸಿಗಳಾದ ಮುದ್ದೇಗೌಡ (48), ಬಸವೇಗೌಡ (45) ಹಾಗೂ ವಿನೋದ್ (17) ಮೃತ ದುರ್ದೈವಿಗಳಾಗಿದ್ದಾರೆ.
ಯುಗಾದಿ ಹಬ್ಬದ ಹಿನ್ನಲೆ ಹಸುಗಳನ್ನು ತೊಳೆಯಲು ಕೆರೆಗೆ ಕರೆದುಕೊಂಡು ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹಸುಗಳನ್ನು ತೊಳೆಯುವಾಗ ವಿನೋದ್ ನನ್ನು ಹಸು ನೀರಿನಲ್ಲಿ ಎಳೆದೊಯ್ದಿದೆ. ಈ ವೇಳೆ ವಿನೋದ್ ನ್ನು ರಕ್ಷಿಸಲು ಮುದ್ದೇಗೌಡ, ಬಸವೇಗೌಡ ರಕ್ಷಿಸಲು ಹೋದಾಗ ಇವರು ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.