ಚಿಕ್ಕಬಳ್ಳಾಪುರ:
ಕೃಷಿ ಹೊಂಡದಲ್ಲಿ ಪಂಪ್ ಸೆಟ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಒಂದೇ ಗ್ರಾಮದ ಮೂವರು ಯುವಕರು ಸಾವನ್ನಪ್ಪಿರುವ ಧಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುಂತಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀಕಾಂತ್ (24) ಲೋಕೇಶ್ (28) ಮತ್ತು ರಮೇಶ್ (24) ಮೃತ ದುರ್ದೈವಿಗಳಾಗಿದ್ದಾರೆ.
ಗ್ರಾಮದ ಪ್ರಸಾದ್ ಎಂಬುವವರ ಕೃಷಿ ಹೊಂಡದಲ್ಲಿ ಈ ಘಟನೆ ನಡೆದಿದೆ. ಪ್ರಸಾದ್ ರವರ ಜಮೀನನ್ನು ಲೋಕೇಶ್ ಭೋಗ್ಯಕ್ಕೆ ಪಡೆದುಕೊಂಡಿದ್ರು. ಕೃಷಿ ಹೊಂಡದಲ್ಲಿದ್ದ ಪಂಪ್ ಸೆಟ್ ಕೆಟ್ಟು ಹೋಗಿದ್ದ ಕಾರಣ ರಿಪೇರಿ ಮಾಡಲು ಲೋಕೇಶ್ ಹಾಗೂ ರಮೇಶ್ ಕೃಷಿ ಹೊಂಡಕ್ಕೆ ಇಳಿದಿದ್ರು, ಆದ್ರೆ ಎಷ್ಟು ಸಮಯವಾದ್ರೂ ಬಾರದೆ ಇದ್ದಕ್ಕೆ ಶ್ರೀಕಾಂತ್ ಮುನಿರಾಜು ಎಂಬುವವರಿಗೆ ಕರೆಮಾಡಿ ತಿಳಿಸಿದ್ದಾನೆ. ಮುನಿರಾಜು ಬರೋವಷ್ಟರಲ್ಲಿ ಶ್ರೀಕಾಂತ್ ಕೂಡ ನೀರಿಗೆ ಇಳಿದಿದ್ದಾನೆ. ಮುನಿರಾಜು ಬಂದು ನೋಡುವಷ್ಟರಲ್ಲಿ ಶ್ರೀಕಾಂತ್ ಕೂಡ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ್ದಾನೆ.
ಇನ್ನು ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಿಮಿಸಿ ಕೃಷಿ ಹೊಂಡದಲ್ಲಿದ್ದ ಮೂವರ ಮೃತದೇಹಗಳನ್ನ ಹೊರತೆಗೆದಿದ್ದಾರೆ. ಈ ಕುರಿತು ಚಿಂತಾಮಣಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.