GUBBI: ತಿನ್ನುವ ಅನ್ನವನ್ನು ಬಿಡದೇ ಕನ್ನ ಹಾಕಿದ ಖದೀಮರು

ಆರೋಪಿಗಳು
ಆರೋಪಿಗಳು
ತುಮಕೂರು

ಗುಬ್ಬಿ: 

ಮನೆ ಮುಂದೆ ಇಟ್ಟಿದ್ದ ರಾಗಿ ಮೂಟೆಗಳನ್ನು ಇಬ್ಬರು ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ರು. ಈ ಘಟನೆ ಗುಬ್ಬಿ ಪಟ್ಟಣದ ಹೊರವಲಯದ ಹೇರೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಜೇಶ್ಎಂಬುವವರ ಮನೆ ಮುಂದೆ ಒಕ್ಕಲು ಮಾಡಿದ್ದ ರಾಗಿಯನ್ನು ಚೀಲಗಳಲ್ಲಿ ತುಂಬಿ ಇಡಲಾಗಿತ್ತು. ಆದ್ರೆ ರಾತ್ರೋ ರಾತ್ರಿ ರಾಗಿ ಸುಮಾರು 4 ಕ್ವಿಂಟಾಲ್ನಷ್ಟು ರಾಗಿಯನ್ನು ಕಳ್ಳರು ದೋಚಿ ಎಸ್ಕೇಪ್ಆಗಿದ್ರು. ರಾಗಿ ಕಳ್ಳತನದಿಂದ ಕಂಗಾಲಾಗಿದ್ದ ರೈತ ರಾಜೇಶ್ಗುಬ್ಬಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು.

ಪ್ರಕರಣ ಕೈಗೆತ್ತಿಕೊಂಡ ಗುಬ್ಬಿ ಪೋಲಿಸರು, ತನಿಖೆಗೆ ಮುಂದಾದ ಬಳಿಕ ಈ ಆರೋಪಿಗಳಿಂದಲೇ ಮತ್ತೊಂದು ಕಳ್ಳತನ ಪ್ರಕರಣ ಬೆಳಗಿಗೆ ಬಂದಿತ್ತು. ಗುಬ್ಬಿ ತಾಲೂಕಿನ ಕಲ್ಲೂರು ಕ್ರಾಸ್ಬಳಿ ಕಳ್ಳರು ಕೈಚಳಕ ತೋರಿಸಿ ರಾಗಿಯನ್ನು ಕದ್ದಿದ್ದರು.. ಈ ಎರಡು ಪ್ರಕರಣಗಳನ್ನು ಬೇದಿಸಲು ವಿಶೇಷ ತಂಡವನ್ನು ರಚಿಸಿ, ಮಿಂಚಿನ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.  

ಪ್ರಕರಣ ಭೇದಿಸಿದ ಪೊಲೀಸರು ಗುಬ್ಬಿ ಪಟ್ಟಣದ ಮಹಾಲಕ್ಷ್ಮೀ ನಗರದ ಪ್ರಶಾಂತ್ಕುಮಾರ್ಹಾಗೂ ಚೇಳೂರು ಹೋಬಳಿಯ ಸಾತೇನಹಳ್ಳಿ ಗ್ರಾಮದ ರಾಜು ಎಂಬುವವರು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು ಒಂದು ಲಕ್ಷದ 55 ಸಾವಿರ ರೂಪಾಯಿ ಮೌಲ್ಯದ 3,713 ಕೆ.ಜಿ ರಾಗಿಯನ್ನು ಮತ್ತು ಕಳ್ಳತಕ್ಕೆ ಬಳಸಿಕೊಂಡಿದ್ದ ಗೂಡ್ಸ್ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಪ್ರಕರಣವನ್ನು ಬೇದಿಸಿದ ಗುಬ್ಬಿ ಪೊಲೀಸ್ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತು ಪೊಲೀಸ್ಸಿಬ್ಬಂದಿಯಾದ ನವೀನ್ ಕುಮಾರ್, ವಿಜಯ್, ಪ್ರಶಾಂತ್, ರಬ್ಬಾನಿ, ಬುತೇಶ್, ನಟರಾಜು ಅವರನ್ನು ಎಸ್ಪಿ ಅಶೋಕ್ಅಭಿನಂದನೆ ಸಲ್ಲಿಸಿದ್ದಾರೆ.

Author:

...
Sub Editor

ManyaSoft Admin

Ads in Post
share
No Reviews