TUMAKURU: ತುಮಕೂರಿನ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು..!

ಗುಂಡಿ ಬಿದ್ದ ರಸ್ತೆ
ಗುಂಡಿ ಬಿದ್ದ ರಸ್ತೆ
ತುಮಕೂರು

ತುಮಕೂರು: 

ನಮ್ಮ ತುಮಕೂರು ಸ್ಮಾರ್ಟ್‌ ಸಿಟಿ ಅಲ್ಲ ಗುಂಡಿಗಳ ಸಿಟಿ ಅಂತಾ ಕರೆದ್ರೆ ಅದಕ್ಕೆ ಸೂಕ್ತ ಅಂತಾ ಅನಿಸುತ್ತೆ. ತುಮಕೂರು ನಗರದ ಪ್ರಮುಖ ಏರಿಯಾಗಳಲ್ಲಿ ಒಂದಾದ ಶಿರಾಗೇಟ್‌ನ 80 ಫೀಟ್‌ ರಸ್ತೆ ಹಾಳಾಗಿ ಸುಮಾರು ಒಂದೂವರೆ ವರ್ಷದಿಂದ 2 ವರ್ಷ ಆಗಿದ್ರು ಕೂಡ ರಸ್ತೆಗೆ ಡಾಂಬರು ಹಾಕಲು ಮಾತ್ರ ಮುಂದಾಗ್ತಾ ಇಲ್ಲ. ಈ 80 ಫೀಟ್‌ ರಸ್ತೆ ಗುಬ್ಬಿ ಗೇಟ್‌ಗೆ ಸಂಪರ್ಕವನ್ನು ಕಲ್ಪಿಸಲಿದ್ದು ಹೆದ್ದಾರಿಯಾಗಿ ಮಾರ್ಪಟ್ಟಿದೆ. ಆದ್ರೆ ರಸ್ತೆ ಸಂಪೂರ್ಣ ಗುಂಡಿ ಮಯವಾಗಿದ್ದು ನಿತ್ಯ ನೂರಾರು ಮಂದಿ ಬೈಕ್‌ ಸವಾರರು ಗುಂಡಿಗೆ ಬಿದ್ದು ಆಸ್ಪತ್ರೆ ಪಾಲಾಗ್ತಾ ಇದ್ದಾರೆ. ಈ ರಸ್ತೆಗೆ ಡಾಂಬರು ಹಾಕಿ ಅಂತಾ ಪಾಲಿಕೆಗೆ ಅದೆಷ್ಟು ಬಾರಿ ಮನವಿ ಮಾಡಿಕೊಂಡಿದ್ರು, ಪ್ರತಿಭಟನೆ ಮಾಡಿದ್ರು ಅಧಿಕಾರಿಗಳು ಮಾತ್ರ ಡೋಂಟ್‌ ಕೇರ್‌ ಅಂತಿದ್ದಾರೆ.

ಇನ್ನು ಗುಬ್ಬಿ ಗೇಟ್‌ನಿಂದ ಶಿರಾಗೇಟ್‌ ಮಾರ್ಗವಾಗಿ ಬೇರೆ ಜಿಲ್ಲೆಗಳಿಗೆ ಹೋಗಬೇಕಾದ್ರೆ ಸಿಟಿಯನ್ನು ಬಳಸಿಕೊಂಡು ಬರಬೇಕಿತ್ತು. ಟ್ರಾಫಿಕ್‌ ಸಮಸ್ಯೆ ಹಾಗೂ ಸಿಟಿಯಿಂದ ಬಳಸಿಕೊಂಡು ಬರಬೇಕಾದ ಸ್ಥಿತಿ ಇತ್ತು ಹೀಗಾಗಿ ಗುಬ್ಬಿಗೇಟ್‌ನಿಂದ ಶಿರಾಗೇಟ್‌ಗೆ ಔಟರ್‌ ರಿಂಗ್‌ರೋಡ್‌ ಮೂಲಕ ಸಂಪರ್ಕಕ್ಕೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದ್ರೆ ಇಲ್ಲಿನ ಸ್ಥಿತಿ ಹೇಗಿದೆ ಅಂದ್ರೆ ಗುಬ್ಬಿ ಗೇಟ್‌ನಿಂದ 80 ಫೀಟ್‌ ರಸ್ತೆ ಬಳಿಯ ಶನಿದೇವರ ದೇವಸ್ಥಾನದ ವರೆಗೂ ಮಾತ್ರ ರಸ್ತೆ ಕಾಮಗಾರಿ ಮಾಡಲಾಗಿದೆ ಅಷ್ಟೇ.. ಆದ್ರೆ ಅಲ್ಲಿಂದ ಶಿರಾಗೇಟ್‌ವರೆಗೂ ಇರೋ 80 ಫೀಟ್‌ ರಸ್ತೆ ಹಾಳಾಗಿ ಸಾವಿರಾರು ಗುಂಡಿಗಳು ಬಿದಿದ್ರು ಕೂಡ ಕಾಮಗಾರಿ ಶುರು ಮಾಡಿಲ್ಲ. ಗುಂಡಿಗಳ ರಸ್ತೆಯಲ್ಲೇ ಲಾರಿ, ಟಿಪ್ಪರ್‌, ಟ್ರ್ಯಾಕ್ಟರ್‌ಗಳು ಸೇರಿ ಎಲ್ಲಾ ಗಾಡಿಗಳು ಓಡಾಡ್ತಾ ಇದ್ವು. ಈಗ ಬೇಸಿಗೆ ಬೇರೆ ಶುರುವಾಗಿದ್ದು ನಿತ್ಯ ಸಾವಿರಾರು ವಾಹನಗಳ ಓಡಾಟದಿಂದ ಸಂಪೂರ್ಣ ಧೂಳುಮಯವಾಗಿದ್ದು, ಸ್ಥಳೀಯರಲ್ಲಿ ಉಸಿರಾಟದ ಸಮಸ್ಯೆ ಶುರುವಾಗಿದ್ದು ಆಸ್ಪತ್ರೆ ಪಾಲಾಗ್ತಾ ಇದ್ದಾರೆ. ಶಾಸಕರೂ, ಅಧಿಕಾರಿಗಳು ಏನೋ ಎಸಿ ರೂಮಿನಲ್ಲಿ ಕೂತಿರ್ತಾರೆ, ಆವರಿಗೆ ಸಮಾನ್ಯ ಜನರ ಕಷ್ಟ ಅರ್ಥ ಆಗಲ್ಲ ಅಂತಾ ಜನರು ಕಿಡಿಕಾರ್ತಾ ಇದ್ದಾರೆ.

ಧೂಳಿನಿಂದ ತಪ್ಪಿಸಲು ಆಗ್ಗಾಗೆ ರಸ್ತೆಗೆ ನೀರು ಹಾಕ್ತಾ ಇದ್ರು. ಆದ್ರೀಗ ನೀರು ಹಾಕೋದನ್ನೇ ಪಾಲಿಕೆ ಸಿಬ್ಬಂದಿ ನಿಲ್ಲಿಸಿದ್ದು, ಮತ್ತೆ ಧೂಳು ಸಮಸ್ಯೆ ಶುರುವಾಗಿದೆ. ಹೀಗಾಗಿ ನಿತ್ಯ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ರಸ್ತೆಗೆ ಡಾಂಬರು ಹಾಕೋದನ್ನ ಬಿಟ್ಟು ಕಬ್ಬಿಣದ ರಾಡ್‌ಗಳು, ಕಲ್ಲುಗಳನ್ನು ಹಾಕಿ ಲಾರಿ ಸೇರಿ ಬೃಹತ್‌ ಗಾಡಿಗಳ ಓಡಾಟಕ್ಕೆ ಬ್ರೇಕ್‌ ಹಾಕಿದೆ. ಇದ್ರಿಂದ ಈಗ ಲಾರಿಗಳು ಮತ್ತೆ ಸಿಟಿಯನ್ನೇ ಸುತ್ತಿಹಾಕಿಕೊಂಡು ಬರಬೇಕಿದೆ.. ಕೆಲ ಲಾರಿ ಡ್ರೈವರ್‌ಗಳು ಕಬ್ಬಿಣದ ರಾಡ್‌ ಇದ್ರು ಸಾಹಸ ಮಾಡಿಕೊಂಡು ಹೋಗ್ತಾ ಇದ್ದಾರೆ. ಆದ್ರೆ ಧೂಳು ಮಾತ್ರ ಕಡಿಮೆ ಆಗಿಲ್ಲ.

ಗುಂಡಿಗಳಿಗೆ ಅಟ್‌ ಲೀಸ್ಟ್‌ ಟಾರ್‌ ಹಾಕಿ ಮುಚ್ಚಿದ್ರೆ ಓಡಾಡಲು ಎಷ್ಟೋ ಉಪಯೋಗ ಆಗುತ್ತೆ.  ಆದ್ರೆ ಆ ಕೆಲಸವನ್ನು ಕೂಡ ಮಾಡ್ತಾ ಇಲ್ಲ. ಗುಂಡಿನೂ ಮುಚ್ಚುತ್ತಿಲ್ಲ, ಟಾರ್‌ ಹಾಕ್ತಿಲ್ಲ. ಗುಂಡಿಗಳನ್ನು ನೋಡಿ ಗಾಡಿ ಓಡಿಸೋದನ್ನೇ ಬಿಟ್ಟು ಬಿಟಿದ್ದೀವಿ ಅಂತಾ ಸ್ಥಳೀಯರು ಆಕ್ರೋಶ ಹೊರಹಾಕಿದ್ರು.

 

 

Author:

...
Sub Editor

ManyaSoft Admin

Ads in Post
share
No Reviews