ಪಾವಗಡ:
ಗಡಿ ತಾಲೂಕು ಪಾವಗಡದಲ್ಲಿ ನರೆಗಾ ಯೋಜನೆಯಡಿಯಲ್ಲಿ ಕೆರೆಯಲ್ಲಿ ಹೂಳೆತ್ತುವ ಕೆಲಸಕ್ಕೆ ಕೂಲಿ ಕಾರ್ಮಿಕರು ರಾಜಕೀಯ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಮುಂದೆ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಪಾವಗಡ ತಾಲೂಕಿನ ಕೊಟಗುಡ್ಡ ಪಂಚಾಯತಿ ವ್ಯಾಪ್ತಿಯ ಕಡಪಲಕೆರೆ ಗ್ರಾಮದ ಸೀತಾರಾಮ ಕೆರೆಯಲ್ಲಿ ನರೇಗಾ ಯೋಜನೆಯಡಿ ಹೂಳೆತ್ತುವ ಕೆಲಸ ಮಾಡಲಾಗುತ್ತಿತ್ತು. ಆದ್ರೆ ಯಾರೋ ಕಿಡಿಗೇಡಿಗಳು ಕಾರ್ಮಿಕರು ಯಂತ್ರಗಳಿಂದ ಕಾಮಗಾರಿ ಮಾಡುತ್ತಿದ್ದಾರೆ ಎಂದು ಇಒ ಹಾಗೂ ಪಿಡಿಒಗೆ ದೂರು ಸಲ್ಲಿಸಿದ್ದು, ನಮ್ಮ ದುಡಿಮೆಯ ಅನ್ನಕ್ಕೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಯಂತ್ರಗಳಿಂದ ನಾವು ಕೆಲಸ ಮಾಡುತ್ತಿದ್ದರೆ ಪ್ರತ್ಯಕ್ಷವಾಗಿ ಹಿಡಿದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಇಲ್ಲ ಸಲದ ಆರೋಪ ಮಾಡಿ ಕೂಲಿಕಾರ್ಮಿಕರಿಗೆ ತೊಂದರೆ ಮಾಡೋದು ಸರಿಯೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯ್ತಿ ಅಧಿಕಾರಿ ಜಾನಕಿ ರಾಮ್ ಪ್ರತಿಭಟನಾಕಾರರನ್ನುಮನವೊಲಿಸಿದ್ದು, ಸ್ಥಳೀಯರು ನೆರೆಗಾ ಕಾಮಗಾರಿಯನ್ನು ಯಂತ್ರಗಳಿಂದ ಮಾಡುತ್ತಿರುವ ಫೋಟೋ ಮೂಲಕ ಆರೋಪ ಮಾಡಿದ್ದಾರೆ.ಅದರ ಬಗ್ಗೆ ಸಂಪೂರ್ಣ ಮಾಹಿತಿ ತನಿಖೆ ನಡೆಸಿ, ನಿಮಗೆ ಕೆಲಸ ಮಾಡಿರುವ ಕೂಲಿ ಹಣ ಕೊಡುತ್ತೇವೆ ಎಂದು ತಿಳಿಸಿದ್ದಾರೆ.