sira charandiತುಮಕೂರು
ಶಿರಾ ನಗರದ ಮಲ್ಲಿಕ್ ರೆಹಮಾನ್ ದರ್ಗಾ ಪಕ್ಕದಲ್ಲಿರೋ ಬೀಡಿ ಕಾಲೋನಿಯಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ… ಆದ್ರೆ ಇಲ್ಲಿನ ನಾಗರೀಕರಿಗೆ ಚರಂಡಿ ಆಗಲಿ, ರಸ್ತೆ ವ್ಯವಸ್ಥೆಯಾಗಲಿ ಇಲ್ಲದೇ ನಿತ್ಯ ಪರದಾಡುವಂತಾಗಿದೆ. ಇನ್ನು ಇಲ್ಲಿನ ಚರಂಡಿಯಲ್ಲಿ ತ್ಯಾಜ್ಯವೇ ತುಂಬಿದ್ದು, ನೀರು ಹರಿಯದೇ ನಿಂತಿದೆ. ಇದ್ರಿಂದ ಇಡೀ ಕಾಲೋನಿಯೇ ಗಬ್ಬು ನಾರುತ್ತಿದೆ…. ಹೀಗಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗ ಹೆಚ್ಚಾಗುವ ಭೀತಿಯಲ್ಲಿ ಇಲ್ಲಿನ ಜನರಿದ್ದಾರೆ. ಇಲ್ಲಿನ ಪರಿಸ್ಥಿತಿ ಹೀಗಿದ್ರು ಕೂಡ ಯಾವೊಬ್ಬ ಅಧಿಕಾರಿಗಳು ಕೂಡ ಇತ್ತ ಬರ್ತಾ ಇಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
15 ವರ್ಷಗಳ ಇಂದೆ ಬೀಡಿ ಕಾರ್ಮಿಕರ ಕಾಲೋನಿ ನಿರ್ಮಾಣ ಆಗಿದ್ದು, ಆಗಿಂದಲೂ ರಸ್ತೆ, ಚರಂಡಿ ಇಲ್ವೇ ಇಲ್ಲ… ಇಲ್ಲಿನ ನಿವಾಸಿಗಳಿಗೆ ಸರ್ಕಾರದ ಯಾವ ರೀತಿಯ ಸೌಲಭ್ಯವೂ ಸಿಗ್ತಾ ಇಲ್ಲ.. ಎಲೆಕ್ಷನ್ ಬಂದಾಗ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ ಅಂತಾರೆ.. ಆದ್ರೆ ಆದ್ರೆ ಈವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಕಿಡಿಕಾರುತ್ತಿದ್ದಾರೆ..
ಇನ್ನಾದ್ರು ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಅಕ್ಕಪಕ್ಕದಲ್ಲಿನ ತಿಪ್ಪೆಗಳನ್ನು ತೆರವುಗೊಳಿಸ ಬೇಕಿದೆ.. ಅಲ್ದೇ ಚರಂಡಿ ಹಾಗೂ ರಸ್ತೆ ಸೌಲಭ್ಯವನ್ನು ಒದಗಿಸಿ ಕೊಡಬೇಕಿದೆ.