ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್‌ ಎದುರಾಗುತ್ತಾ..?

ಬೆಂಗಳೂರು:

ರಾಜ್ಯದ ಜನತೆಗೆ ಒಂದರ ಮೇಲೆ ಒಂದರಂತೆ ಸರ್ಕಾರದಿಂದ ದರ ಏರಿಕೆ ಶಾಕ್‌ ನೀಡುತ್ತಿದೆ, ಹೌದು ಸರ್ಕಾರ ಬಸ್‌ ಟಿಕೇಟ್‌ ದರ, ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಇದೀಗ ಪ್ರತಿ ಲೀಟರ್‌ ನಂದಿನ ಹಾಲಿಗೆ 5 ರೂ ದರ ಹೆಚ್ಚಳ ಮಾಡುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಹೌದು ಇಂದು ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕ ಭೀಮಾ ನಾಯಕ್‌ ಅವರು ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಲಿದ್ದಾರೆ. ಸಿಎಂ ಅನುಮತಿ ಸಿಕ್ಕ ನಂತರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಹಾಲಿನ ದರ ಏರಿಕೆಯಿಂದ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಬೀಳೊದಂತು ನಿಜಾ ಎನ್ನಬಹುದು. ಈಗಾಗಲೇ ದರ ಏರಿಕೆಗಳಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಸರ್ಕಾರ ಹಾಲಿನ ದರ ಏರಿಕೆಗೆ ಸಮ್ಮತಿ ಸೂಚಿಸಿರಲಿಲ್ಲ ಆದರೆ ಹಾಲು ಒಕ್ಕೂಟ ರೈತರಿಂದ ಹಾಲು ದರ ಹೆಚ್ಚಳಕ್ಕೆ ಒತ್ತಾಯ ಮಾಡ್ತಿರುವುದರಿಂದ ಹಾಗೂ ಆರ್ಥಿಕ ಸಂಕಷ್ಟದ ಹಿನ್ನಲೆ ದರ ಏರಿಸುವಂತೆ ಸರ್ಕಾರದ ಮೇಲೆ ಕೆಎಂಎಫ್ ಒತ್ತಡ ಹೇರುತ್ತಲೇ ಇದೆ. ಹೀಗಾಗಿ ರೈತರಿಗೆ ಅನುಕೂಲ ದೃಷ್ಠಿಯಿಂದ ಹಾಲಿನ ದರ ಪರಿಷ್ಕರಣೆ ಮಾಡಲು ಸರ್ಕಾರ ಕೂಡಾ ಸದ್ಯದಲ್ಲೇ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಆದರೆ ರಾಜ್ಯ ಹೊಟೇಲ್‌ ಗಳ ಸಂಘ ಇದನ್ನು ತೀವ್ರವಾಗಿ ವಿರೋಧಿಸಿದೆ. ರಾಜ್ಯ ಸರ್ಕಾರ ಇದಕ್ಕೆ ಸಮ್ಮತಿ ನೀಡುತ್ತೋ..? ಇಲ್ಲವೋ..? ಕಾದು ನೋಡಬೇಕಿದೆ.

Author:

...
Editor

ManyaSoft Admin

Ads in Post
share
No Reviews