ಪಾವಗಡ:
ಗಡಿ ತಾಲೂಕು ಪಾವಗಡದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗ್ತಾ ಇದ್ದು, ಜನರಂಥೂ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಗರಿಷ್ಠ 38 ಡಿಗ್ರಿಯಿಂದ 38 ರಷ್ಟು ಉಷ್ಣಾಂಶ ಇದ್ದು ಜನರು ಮನೆಯಿಂದ ಹೊರಬರಲು ಕೂಡ ಯೋಚನೆ ಮಾಡುವಂತಾಗಿದೆ. ಈ ಮಧ್ಯೆ ಇಲ್ಲೋಬ್ಬರು ಜನರ ದಣಿವು ನೀಗಿಸುವಂತಹ ಕೆಲಸವನ್ನು ಮಾಡ್ತಾ ಇದ್ದಾರೆ. ಈಗ ಶಾಲಾ ಮಕ್ಕಳಿಗೆ ಪರೀಕ್ಷೆ ಆರಂಭವಾಗಿದೆ ಜೊತೆಗೆ ದಿನ ನಿತ್ಯ ಕೆಲಸಕ್ಕೆಂದು ಪಾವಗಡಕ್ಕೆ ಬರ್ತಾರೆ. ದಣಿವು ಆರಿಸಲು ಎಲ್ಲರೂ ಹಣ ಕೊಟ್ಟು ನೀರು ಖರೀದಿಸಲು ಸಾದ್ಯವಾಗೋದಿಲ್ಲ, ಹೀಗಾಗಿ ರಸ್ತೆ ಬದಿಯಲ್ಲಿ ಟೆಂಟ್ ನಿರ್ಮಾಣ ಮಾಡಿ ನೀರನ್ನು ಇಟ್ಟು, ಜನರ ದಣಿವನ್ನು ನೀಗಿಸ್ತಾ ಇದ್ದಾರೆ.
ಪಾವಗಡ ಪಟ್ಟಣದ ಪೆನುಗೊಂಡಗೆ ಹೋಗುವ ರಸ್ತೆಯ ಗುರುಭವನದ ಬಳಿ ಬಂಡೆ ಶಫಿ ಎಂಬುವವರು ಕಳೆದ ನಾಲ್ಕೈದು ವರ್ಷಗಳಿಂದ ಟೆಂಟ್ ನಿರ್ಮಾಣ ಮಾಡಿ, ಸುಮಾರು 15 ಕ್ಯಾನ್ ನೀರನ್ನು ಇರಿಸಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಹೋಗುವ ಶಾಲಾ- ಕಾಲೇಜು ಮಕ್ಕಳು, ಪ್ರಯಾಣಿಕರು ದಣಿವಾದಾದರೆ ಇಲ್ಲಿ ಬಂದು ನೀರು ಕುಡಿದು ದಣಿವು ಆರಿಸಿಕೊಂಡು ಹೋಗಬಹುದಾಗಿದೆ. ಇದರಿಂದ ಸಾಕಷ್ಟು ಮಂದಿ ಉಪಯೋಗ ಪಡೆದುಕೊಳ್ತಾ ಇದ್ದು ಬಂಡೆ ಶಫಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸ್ತಾ ಇದ್ದಾರೆ.