ತುಮಕೂರು : ಪ್ರಜಾಶಕ್ತಿ ಟಿವಿಯು ತುಮಕೂರಿನಲ್ಲಿರುವ ಜನರ ಧ್ವನಿಯಾಗಿ ಕೆಲಸ ಮಾಡ್ತಿದೆ. ಜನರ ಸಮಸ್ಯೆಗಳನ್ನ ಆಲಿಸಿ ಅದನ್ನು ಅಧಿಕಾರಿಗಳ ಮುಂದಿಟ್ಟು ಬಗೆಹರಿಸುವ ಕಾರ್ಯಕ್ಕೆ ಮುಂದಾಗಿದೆ. ಅದರಂತೆ ತುಮಕೂರಿನ ಪ್ರತಿಷ್ಠಿತ ಶಾಲೆಯೊಂದರ ಪಕ್ಕದ ಜಾಗದಲ್ಲಿ ಕಸದ ರಾಶಿ ತುಂಬಿ ಗಬ್ಬೆದ್ದು ನಾರುತ್ತಿತ್ತು. ಇದರಿಂದ ಆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಮೂಗುಮುಚ್ಚಿಕೊಂಡೆ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ದುಸ್ಥಿತಿಯನ್ನು ಕಂಡ ನಿಮ್ಮ ಪ್ರಜಾಶಕ್ತಿ ಟಿವಿ ಕಸದ ಕುರಿತಾಗಿ ವರದಿ ಮಾಡಿತ್ತು. ಇದೀಗ ನಮ್ಮ ವರದಿಗೆ ಎಚ್ಚೆತ್ತುಕೊಂಡ ಪಾಲಿಕೆಯ ಅಧಿಕಾರಿಗಳು ಕಸವನ್ನು ತೆಗೆಸುವ ಕೆಲಸ ಮಾಡಿಸುತ್ತಿದ್ದಾರೆ. ಇದು ನಿಮ್ಮ ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್.
ತುಮಕೂರಿನ ವಾರ್ಡ್ ನಂ 19 ರಲ್ಲಿರುವ ಶುಭೋದಯ ಶಾಲೆಯ ಪಕ್ಕದಲ್ಲಿರುವ ಜಾಗದಲ್ಲಿ ಕಸದ ರಾಶಿಯೇ ತುಂಬಿತ್ತು. ಈ ಕಸದ ರಾಶಿಯಿಂದಾಗಿ ಅಲ್ಲಿ ಓಡಾಡಲು ಜನರು ಕಷ್ಟಪಡುತ್ತಿದ್ದರು. ಹಾಗೇ ಸುತ್ತಮುತ್ತ ವಾಸಿಸುವ ಜನರು ಅನಾರೋಗ್ಯದಿಂದ ಬಳಲುವಂತಾಗಿತ್ತು. ಇಂತಹ ಸಮಸ್ಯೆಯನ್ನು ಕಂಡು ಕಾಣದಂತೆ ಪಾಲಿಕೆ ನಿರ್ಲಕ್ಷ್ಯ ತೋರುತ್ತಿತ್ತು. ಈ ಕುರಿತಾಗಿ ಸುದ್ದಿ ಬಿತ್ತರಿಸಿದ ನಿಮ್ಮ ಪ್ರಜಾಶಕ್ತಿ ಟಿವಿ ಅಧಿಕಾರಿಗಳನ್ನ ಎಚ್ಚರಿಸುವ ಕೆಲಸ ಮಾಡಿತ್ತು. ಅದರಂತೆ ನಮ್ಮ ಒಂದೇ ಒಂದು ಸುದ್ದಿಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಖಾಲಿ ಜಾಗದಲ್ಲಿ ಬಿದ್ದಿದ್ದ ಕಸವನ್ನು ಸಿಬ್ಬಂದಿಗಳಿಂದ ಕ್ಲೀನ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ.