ಕಿರುತರೆ ನಟ ನಟಿಯರು ದಾಂಪತ್ಯ ಜೀವನಕ್ಕೆ ಒಬ್ಬರಾದ ಮೇಲೆ ಒಬ್ಬರಂತೆ ಕಾಲಿಡುತ್ತಿದ್ಧಾರೆ. ಇದೇ ತಿಂಗಳು ಇಬ್ಬರು ಕಿರುತರೆ ನಟಿಯರು ವಿವಾಹವಾಗಿದ್ದಾರೆ. ಸೀತಾರಾಮ ಧಾರವಾಹಿಯ ನಟಿ ಮೇಘನಾ ಶಂಕ್ರಪ್ಪ ಹಾಗೂ ನಟಿ ಮಾನ್ಸಿ ಜೋಶಿ ಇಬ್ಬರು ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಈಗ ಕಿರುತರೆ ನಟಿ ಮೇಘಶ್ರೀ ಗೌಡ ಅವರು ಮಧುಮಗಳಾಗಿದ್ದಾರೆ.
ಕನ್ನಡ ಕಿರುತರೆ ಲೋಕದಲ್ಲೇ ವಿಲನ್ ಪಾತ್ರದ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಮೇಘಶ್ರೀ ಗೌಡ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಮೇಘಶ್ರೀ ಹೊಸ ವರ್ಷದ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡು, ತಾವು ಮದುವೆಯಾಗುತ್ತಿರೋ ಹುಡುಗನ ಫೋಟೋವನ್ನು ರಿವೀಲ್ ಮಾಡಿದ್ದರು.
ಆದ್ರೆ ಫೋಟೋದಲ್ಲಿ ಹುಡುಗ ಮುಖವನ್ನು ತೋರಿಸಿಲ್ಲ. ಜೊತೆಗೆ ತಾವು ಮದುವೆ ಆಗುತ್ತಿರೋ ಹುಡುಗ ಯಾರು ಅಂತ ಕೂಡ ರಿವೀಲ್ ಮಾಡಿರಲಿಲ್ಲ. ಇದೀಗ ಕುಂದಾಪುರ ಮೂಲದ ಪುರಂದರ ಎಂಬುವವರ ಜೊತೆಗೆ ನಟಿ ಮದುವೆಯಾಗಿದ್ದಾರೆ.