ತುಮಕೂರು:
ಭಾರತೀಯ ಮುಸ್ಲಿಮರ ಆರ್ಥಿಕ ಸ್ಥಿರತೆ ಎಂಬ ವಿಚಾರವಾಗಿ ತುಮಕೂರಿನ ಬಾರ್ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತುಮಕೂರು ರಿಫಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ವತಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಿಫಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ರಾಜ್ಯಾಧ್ಯಕ್ಷ ಸೈಯದ್ ಮುಮ್ತಾಜ್ ಮನ್ಸೂರಿ ಮುಸ್ಲಿಂ ಭಾಂದವರಿಗೆ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಉಪನ್ಯಾಸ ನೀಡಿದರು.
ನಾವು ಮಾಡುವ ವ್ಯಾಪಾರದಲ್ಲಿ ದೂರದೃಷ್ಟಿ ಇರಬೇಕು. ನಾವು ಕೇವಲ ಈಗಿನದ್ದು ಮಾತ್ರ ಯೋಚಿಸುತ್ತೇವೆ. ದೂರದೃಷ್ಟಿ ಇಟ್ಟು ವ್ಯಾಪಾರ, ವ್ಯವಹಾರ ಮಾಡಿದರೆ ಮಾತ್ರ ಯಶಸ್ಸು ಸಾಧಿಸಬಹುದು. ಜಗತ್ತು ತುಂಬಾ ಮುಂದುವರೆಯುತ್ತಿದೆ. ಎಐ ತಂತ್ರಜ್ಞಾನಕ್ಕೆ ಪ್ರಪಂಚ ತೆರೆದುಕೊಂಡಿದೆ. ಹೀಗಾಗಿ ದೂರದೃಷ್ಟಿ ಇಲ್ಲದಿದ್ದರೆ, ವೈಜ್ಞಾನಿಕತೆಗೆ ಒಗ್ಗಿಕೊಳ್ಳದಿದ್ದರೆ ಉದ್ಯಮಗಳನ್ನು ನಡೆಸೋದು ಕಷ್ಟವಾಗಲಿದೆ ಅಂತಾ ಮುಸ್ಲಿಂ ಉದ್ಯಮಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರದ ನೂರಾರು ಮುಸ್ಲಿಂ ಮುಖಂಡರು, ಉದ್ಯಮಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಬಳಿಕ ಮುಸ್ಲಿಂ ಬಾಂದವರು ಅಲ್ಲಾಹುವಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.