CRICKET : CSK ತಂಡಕ್ಕೆ ಮತ್ತೆ ಸುರೇಶ್ ರೈನಾ ಎಂಟ್ರಿ ?

ಕ್ರಿಕೆಟ್‌ : ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಸೀಸನ್ ಮುಕ್ತಾಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಭಾರಿ ಬದಲಾವಣೆಗಳು ನಡೆಯಲಿವೆ. ತಂಡದ ಕೆಲ ಹಿರಿಯ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗಳಿಗೆ ‘ಗೇಟ್ ಪಾಸ್’ ನೀಡಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ಸಿಎಸ್​ಕೆ ಫ್ರಾಂಚೈಸಿ ಬಯಸಿದೆ.  ಈ ಬದಲಾವಣೆಯ ಹಿನ್ನಲೆಯಲ್ಲಿ ಪ್ರಮುಖವಾಗಿ ಬ್ಯಾಟಿಂಗ್ ಕೋಚ್ ಸ್ಥಾನದಲ್ಲಿ ಬದಲಾವಣೆ ಸಾಧ್ಯವಿದೆ. ಪ್ರಸ್ತುತ ಬ್ಯಾಟಿಂಗ್ ಕೋಚ್ ಆಗಿರುವ ಆಸ್ಟ್ರೇಲಿಯಾದ ಮೈಕಲ್ ಹಸ್ಸಿಯನ್ನು ಬಿಡುಗಡೆ ಮಾಡಲು ಸಿಎಸ್‌ಕೆ ಮುಂದಾಗಿದೆ ಎಂಬ ಸುದ್ದಿ ಇದೀಗ ಧ್ವನಿಗೊಳ್ಳುತ್ತಿದೆ.

ಚೆನ್ನೈ ತಂಡದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಈ ವಿಚಾರಕ್ಕೆ ಮತ್ತಷ್ಟು ಸ್ಪಷ್ಟತೆ ನೀಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯಾವಳಿಯ ವೇಳೆ ಚಾನೆಲ್ ಚರ್ಚೆಯಲ್ಲಿ ಭಾಗವಹಿಸಿದ್ದ ರೈನಾ, ಸಿಎಸ್‌ಕೆ ತಂಡ ಹೊಸ ಬ್ಯಾಟಿಂಗ್ ಕೋಚ್ ನೇಮಕ ಕುರಿತಂತೆ ಚರ್ಚೆ ನಡೆಸುತ್ತಿದೆ, ಎಂದು ಹೇಳಿದರು.

ಇನ್ನು ರೈನಾಗೆ ಪ್ಯಾನೆಲ್‌ನ ಆಕಾಶ್ ಚೋಪ್ರಾ, "ಅವರ ಹೆಸರು ‘S’ ಅಕ್ಷರದಿಂದ ಪ್ರಾರಂಭವಾಗುತ್ತದೆಯೇ?" ಎಂದು ಕೇಳಿದಾಗ, ರೈನಾ ನೇರವಾಗಿ ಉತ್ತರ ನೀಡದಿದ್ದರೂ, ಅವರು ಸಿಎಸ್‌ಕೆ ಪರ ಅತ್ಯಂತ ವೇಗದ ಅರ್ಧಶತಕ ಸಿಡಿಸಿರುವವರು ಎಂದು ಸುಳಿವು ನೀಡಿದರು. ಈ ಸೂಚನೆಯ ಅನ್ವಯ ಗಮನ ಹರಿಸಿದರೆ, 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಸುರೇಶ್ ರೈನಾ ಅವರುಈ ಪದವಿಗೆ ಯೋಗ್ಯ ಅಭ್ಯರ್ಥಿಯಾಗಿದ್ದಾರೆ ಎಂಬ ತೀವ್ರ ಅನುಮಾನ ಕಾಡುತ್ತಿದೆ.

ಇದರಿಂದಾಗಿ, ಐಪಿಎಲ್ 2026ರಲ್ಲಿ ಸುರೇಶ್ ರೈನಾ ಸಿಎಸ್‌ಕೆ ತಂಡದ ಬ್ಯಾಟಿಂಗ್ ಕೋಚ್ ಆಗಿ ಹಾಜರಾಗಬಹುದು ಎಂಬ ವಿಶ್ವಾಸ ಮೂಡಿದೆ. ಎಸ್​ಕೆ ಫ್ರಾಂಚೈಸಿ ಯುವ ಪಡೆಗಳಗಳೊಂದಿಗೆ ಹೊಸ ತಂಡವನ್ನು ಕಟ್ಟಲು ಮುಂದಾಗಿದ್ದು, ಅದರಂತೆ ಇದೀಗ ಯುವ ದಾಂಡಿಗರ ದಂಡೇ ಸಿಎಸ್​ಕೆ ಬಳಗದಲ್ಲಿದೆ. ಹೀಗಾಗಿ ಸುರೇಶ್ ರೈನಾ ಅವರನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿ ಹೊಸ ಜವಾಬ್ದಾರಿ ನೀಡುವ ಸಾಧ್ಯತೆ ಹೆಚ್ಚಿದೆ.

Author:

...
Keerthana J

Copy Editor

prajashakthi tv

share
No Reviews