ಮೊಮ್ಮಗನಿಗೆ ಅಂಬರೀಶ್‌ ಹೆಸರಿಟ್ಟ ಸುಮಲತಾ

ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ಅಪ್ಪನ‌ ಹೆಸರಿಟ್ಟಿದ್ದಾರೆ. ಅಭಿಷೇಕ್ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ. ಇನ್ನು ಅಂಬರೀಶ್‌ ಅವರ ಮೂಲ ಹೆಸರು ಅಮರನಾಥ್.‌  ಸಿನಿಮಾ ಇಂಡಿಸ್ಟ್ರಿಗೆ ಎಂಟ್ರಿ ಕೊಟ್ಟ ಮೇಲೆ ಅಂಬರೀಶ್‌ ಎಂದು ಅವರು ಬದಲಿಸಿದ್ದರು. ಅವರ ಮೂಲ ಹೆಸರನ್ನೇ ರಾಣಾ ಹೆಸರಿನ ಜೊತೆ ಅಮರ್‌ ಮತ್ತು ಅಂಬರೀಶ್‌ ಎಂದು ಸೇರಿಸಲಾಗಿದೆ.

ಸುಮಲತಾ ಮೊಮ್ಮಗನಿಗೆ ನಾಮಕರಣ ಶಾಸ್ತ್ರ ನೆರವೇರಿದೆ. ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದಪ್ಪ ಅವರು 2023ರ ಜೂನ್ 5 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಬಳಿಕ ಮಂಡ್ಯದಲ್ಲಿ ಬೀಗರೂಟ ಸಹ ಆಯೋಜಿಸಲಾಗಿತ್ತು.  2024ರ ನವೆಂಬರ್ 12ರಂದು ಅಭಿಷೇಕ್ ಅವಿವಾಗೆ ಗಂಡು ಮಗು ಜನಿಸಿತ್ತು. ಅ ಅನ್ನೋ ಹೆಸರಿನಲ್ಲೇ ಮಗುವಿಗೆ ಹೆಸರಿಡುವ ಪ್ಲಾನ್ ಕುಟುಂಬಸ್ಥರು ಮಾಡಿದ್ದರು. ಅಂಬರೀಶ್ ಅವರ ಹೆಸರಿಡುವ ಬಗ್ಗೆಯೂ ಚರ್ಚಿಸಿದ್ದ ಕುಟುಂಬಸ್ಥರು ಅಂತಿಮವಾಗಿ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.

 

Author:

...
Sub Editor

ManyaSoft Admin

Ads in Post
share
No Reviews