ಪಾವಗಡ: ಬಾಲಕಿಯರ ವಸತಿ ನಿಲಯಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ದಿಢೀರ್ ಭೇಟಿ

ಬಾಲಕಿಯರ ವಸತಿ ನಿಲಯಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿಯವರು ಭೇಟಿ
ಬಾಲಕಿಯರ ವಸತಿ ನಿಲಯಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿಯವರು ಭೇಟಿ
ತುಮಕೂರು

ಪಾವಗಡ:

ಗಡಿ ತಾಲೂಕು ಪಾವಗಡದ ವಸತಿ ನಿಲಯದಲ್ಲಿ ಅವ್ಯವಸ್ಥೆ ಇದ್ದು, ಮಕ್ಕಳು ವಸತಿ ನಿಲಯದಲ್ಲಿ ಗೈರಾಗುತ್ತಿರೋದು ಕಂಡು ಬಂದಿದೆ. ಪಾವಗಡ ಪಟ್ಟಣದ ವ್ಯಾಪ್ತಿಯಲ್ಲಿರೋ ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿಯವರು ಭೇಟಿ ನೀಡಿ, ವಸತಿ ನಿಲಯವನ್ನು ಪರಿಶೀಲನೆ ನಡೆಸಿದರು. ಸುಮಾರು ಗಂಟೆಗಳ ಕಾಲ ಹಾಸ್ಟೆಲ್‌ನಲ್ಲಿ ಬೀಡು ಬಿಟ್ಟು ಇಂಚಿಂಚೂ ಬಿಡದೇ ಪರಿಶೀಲನೆ ನಡೆಸಿದರು.

ಈ ವೇಳೆ ದೇವರಾಜ ಅರಸು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳು ಅನಾರೋಗ್ಯದಿಂದ ಗೈರಾಗಿರೋದು ಕಂಡು ಬಂದಿದೆ. ಜೊತೆಗೆ ವಸತಿ ನಿಲಯದಲ್ಲಿ ನೀರಿನ ಸೌಲಭ್ಯವಾಗಲಿ, ಶುಚಿತ್ವವೂ ಮರಿಚೀಕೆಯಾಗಿದೆ. ಶೌಚಾಲಯವನ್ನು ವಾರದಲ್ಲಿ ಒಂದು ತಿಂಗಳಿಗೊಮ್ಮೆ ಕ್ಲೀನ್‌ ಮಾಡಿಸುತ್ತಿದ್ದು, ಇದರಿಂದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಿದ್ದು, ತಿಂಗಳುಗಟ್ಟಲೆ ವಸತಿ ನಿಲಯಕ್ಕೆ ಗೈರಾಗಿರೋದು ಬೆಳಕಿಗೆ ಬಂದಿದೆ. ಇನ್ನು ವಸತಿ ನಿಲಯದಲ್ಲಿ ಹಾಸ್ಟೆಲ್‌ನ ವಾರ್ಡನ್‌ ಕೂಡ ಗೈರಾಗಿರೋದು ಕಂಡು ಬಂದಿದ್ದು, ಈ ಬಗ್ಗೆ ಕ್ರಮಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿ ಮುಂದಾಗಿದ್ದಾರೆ.

ಇನ್ನು ಹಾಸ್ಟೆಲ್‌ನಲ್ಲಿ ಹಾಜರಾತಿ ಪುಸ್ತಕವನ್ನು ಸರಿಯಾಗಿ ಮೇಂಟೇನ್‌ ಮಾಡಿಲ್ಲ, ಜೊತೆಗೆ ಸಿಸಿ ಕ್ಯಾಮೆರಾ ಕೂಡ ಸರಿಯಾಗಿ ವರ್ಕ್‌ ಆಗುತ್ತಿಲ್ಲ. ಇದಿಷ್ಟು ಅಲ್ಲದೇ ನಾನಾ ಸಮಸ್ಯೆಗಳು ಹಾಸ್ಟೆಲ್‌ನಲ್ಲಿ ಇದ್ದು ವಾರ್ಡನ್‌ ಗಮನಕ್ಕೆ ಬಂದರು ಕೂಡ ಸರಿ ಪಡಿಸುವ ಕೆಲಸಕ್ಕೆ ಮಾತ್ರ ಕೈ ಹಾಕಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿ ಮೇಲಾಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಇನ್ನಾದರೂ ವಸತಿ ನಿಲಯದ ಸಮಸ್ಯೆಯನ್ನು ಬಗೆಹರಿಸಿ ಮಕ್ಕಳ ಆರೋಗ್ಯವನ್ನು ಕಾಪಾಡ್ತಾರಾ ಎಂದು ಕಾದುನೋಡಬೇಕಿದೆ.

Author:

...
Editor

ManyaSoft Admin

Ads in Post
share
No Reviews