ಶಿರಾ : ಶಿರಾದ ಕೆಲ ಮೆಡಿಕಲ್ ಸ್ಟೋರ್‌ ಗಳ ಮೇಲೆ ದಿಢೀರ್ ಪೊಲೀಸ್ ರೇಡ್

ಮೆಡಿಕಲ್‌ ಸ್ಟೋರ್‌ಗಳಲ್ಲಿ ಪೊಲೀಸ್‌ ಇಲಾಖೆ ಪರಿಶೀಲನೆ
ಮೆಡಿಕಲ್‌ ಸ್ಟೋರ್‌ಗಳಲ್ಲಿ ಪೊಲೀಸ್‌ ಇಲಾಖೆ ಪರಿಶೀಲನೆ
ತುಮಕೂರು

ಶಿರಾ :

ಕೆಲವು ಮಾತ್ರೆಗಳನ್ನು ಮಾದಕ ವಸ್ತುಗಳ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಅಂತಹ ಮಾತ್ರೆಗಳ ಮಾರಾಟ, ಖರೀದಿ ಮೇಲೆ ಪೊಲೀಸ್‌ ಇಲಾಖೆ ಹಾಗೂ ಔಷಧಿ ನಿಯಂತ್ರಣ ಇಲಾಖೆ ನಿಗಾ ಇಟ್ಟಿದೆ. ಈ ಬೆನ್ನಲ್ಲೇ ಇಂದು ಬೆಳ್ಳಂ ಬೆಳಗ್ಗೆ ಶಿರಾದ ಕೆಲ ಸಂಶಯಾಸ್ಪದ ಮೆಡಿಕಲ್‌ ಸ್ಟೋರ್‌ಗಳ ಮೇಲೆ ಪೊಲೀಸ್‌ ಇಲಾಖೆ ರೇಡ್‌ ಮಾಡಿ ಪರಿಶೀಲನೆ ನಡೆಸಿತು.

ಹೌದು, ಮಾತ್ರೆಗಳನ್ನು ಮಾದಕ ವಸ್ತುಗಳ ರೀತಿಯಲ್ಲಿ ಬಳಕೆ ಮಾಡುವ ಹವ್ಯಾಸ ಹೆಚ್ಚಾಗಿದ್ದು, ವ್ಯಸನಿಗಳು ಏರಿಕೆಯಾಗುತ್ತಿದ್ದಾರೆ. ಹೀಗಾಗಿ ಜಿಲ್ಲಾ ಔಷಧಿ ನಿಯಂತ್ರಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ಶಿರಾ ನಗರದ ಸಂಶಯಾಸ್ಪದ ಮೆಡಿಕಲ್‌ ಸ್ಟೋರ್‌ಗಳನ್ನು ಪರಿಶೀಲನೆ ಮಾಡಲು ಮುಂದಾಯಿತು.

ಔಷಧ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೇ ಔಷಧಗಳನ್ನು ನೀಡಲೇಬಾರದು ಎನ್ನುವ ನಿಯಮ ಇದ್ದರೂ ಕೂಡ ಅದರ ಪಾಲನೆ ಮಾಡುವ ವಿಚಾರದಲ್ಲಿ ಬಹಳಷ್ಟು ಲೋಪದೋಷಗಳು ಕಾಣಿಸಿಕೊಳ್ಳುತ್ತಿದ್ದು. ಈ ಬಗ್ಗೆ ಪೊಲೀಸ್‌ ಇಲಾಖೆಗೆ ಸಾಕಷ್ಟು ದೂರು ಬಂದ ಹಿನ್ನೆಲೆ  ಶಿರಾದಲ್ಲಿ ಹೆಚ್ಚು ಔಷಧಿ ಖರೀದಿ ಮಾಡುವ ಮೆಡಿಕಲ್‌ ಸ್ಟೋರ್‌ಗಳ ಮೇಲೆ ಧಿಡೀರ್‌ ತಪಾಸಣೆಗೆ ಇಲಾಖೆ ಇಳಿದಿತ್ತು. ದಾಳಿ ಬಳಿಕ ಆದರು ಮೆಡಿಕಲ್‌ ಸ್ಟೋರ್‌ಗಳಲ್ಲಿ ಮಾದಕ ವಸ್ತುಗಳ ಮಾರಾಟ ಕಡಿಮೆ ಆಗುತ್ತಾ ಎಂದು ಕಾದುನೋಡಬೇಕಿದೆ.

 

Author:

share
No Reviews