ಗುಬ್ಬಿ:
ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮದ ಐತಿಹಾಸಿಕ ಶ್ರೀ ತಿರುಮಲ ದೇವಾಲಯದ ಬಳಿಯ ಹರಿಹರ ರಸ್ತೆಯಲ್ಲಿ ಹಿರಿಯರ ಸ್ಮರಣಾರ್ಥ 30 ವಿಶೇಷ ತಳಿಗಳ ಸಸಿಗಳನ್ನು ನೆಡುವ ಮೂಲಕ ಸಾಮಾಜಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಟ್ರಸ್ಟ್ ಕಾರ್ಯದರ್ಶಿಗಳಾದ ಸ್ಮಿತಾ ಶ್ರೀನಿವಾಸ್, ಶೈಲಜಾ ಹಾಗೂ ಟ್ರಸ್ಟ್ ಸದಸ್ಯರು ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ತಿರುಮಲ ಟ್ರಸ್ಟ್ನ ಅಧ್ಯಕ್ಷ ಬಿದರೆ ಪ್ರಕಾಶ್, ಇತಿಹಾಸ ಪ್ರಸಿದ್ದ ಬಿದರೆ ಗ್ರಾಮ ಸುಮಾರು 40 ದೇವಾಲಯಗಳನ್ನು ಹೊಂದಿದ್ದು, ತಿರುಮಲ ದೇವಾಲಯ ಯಾವುದೇ ಜಾತಿ ತಾರತಮ್ಯವಿಲ್ಲದೇ ಧಾರ್ಮಿಕ ಕ್ಷೇತ್ರವಾಗಿದೆ. ತೋಟಗಳಲ್ಲಿ ಗಿಡ ನೆಟ್ಟು ಪೋಷಿಸಿದರೆ ಒಂದು ಕುಟುಂಬವಷ್ಟೇ ಸ್ಮರಿಸುತ್ತೇ. ಅಲ್ಲದೇ ತಿರುಮಲ ಟ್ರಸ್ಟ್ ಪರಿಸರ ಕಾಳಜಿ ಹೊತ್ತು ಸಾಂಪ್ರದಾಯಿಕ ಸಸಿಗಳನ್ನು ನೆಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ಯಾವಾಗಲೂ ನಿರತವಾಗಿದ್ದು. ಸಾರ್ವಜನಿಕ ರಸ್ತೆಗಳಲ್ಲಿ ಹೂವು ಹಣ್ಣು ನೀಡುವ ಸಸಿಗಳನ್ನು ನೆಟ್ಟು ಪೋಷಿಸಿದರೆ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸುವ ಜೊತೆ ಮುಂದಿನ ಪೀಳಿಗೆಗೆ ಸಾಮಾಜಿಕ ಕಳಕಳಿ ಬಗ್ಗೆ ಇದು ಮಾದರಿಯಾಗುತ್ತದೆ ಎಂದು ತಿಳಿಸಿದರು.