sports-ಆರ್‌ಸಿಬಿ ವಿರುದ್ಧ ಹೀನಾಯ ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್

WPL ನಲ್ಲಿ ಆರ್ ಸಿಬಿ ತಂಡ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ವಡೋದರಾ ಅಂತರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್​ 4ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​​ಸಿಬಿ 8 ವಿಕೆಟ್​​​ಗಳಿಂದ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಆರ್ ಸಿಬಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.  ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಆರ್​​ಸಿಬಿ 141 ರನ್ ಗಳಿಸಿ ಸಾಧಾರಣ ಗುರಿ ನೀಡಿತ್ತು. ಡೆಲ್ಲಿ ನೀಡಿದ 142 ರನ್​ಗಳ ಗುರಿ ಬೆನ್ನತ್ತಿದ ಆರ್​​ಸಿಬಿ ಇನ್ನೂ 3.4 ಬಾಲ್​​ ಇರುವಂತೆಯೇ ಗೆದ್ದು ಬೀಗಿದೆ.

ಸಾಧಾರಣ ರನ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ಪರ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 81 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕ್ಯಾಪ್ಟನ್​ ಸ್ಮೃತಿ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​ 170ಕ್ಕೂ ಹೆಚ್ಚು ಇತ್ತು.  ಉಳಿದಂತೆ ಡೇನಿಯಲ್‌ ವ್ಯಾಟ್-ಹಾಡ್ಜ್ 33 ಎಸೆತಗಳಲ್ಲಿ 42 ರನ್ ಗಳಿಸಿದರು.. ರಿಚಾ ಘೋಶ್ 5 ಎಸೆತಗಳಲ್ಲಿ 11 ರನ್ ಗಳಿಸಿದರು.

Author:

...
Editor

ManyaSoft Admin

Ads in Post
share
No Reviews