sira -ಪ್ರೆಸಿಡೆನ್ಸಿ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಫುಡ್ ಪಾಯ್ಸನ್ !! ಅಸ್ವಸ್ಥಗೊಂಡ ೬೦ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು..

 ಅಸ್ವಸ್ಥಗೊಂಡಿರೋ ಮಕ್ಕಳಿಗೆ ಶಿರಾ ತಾಲೂಕು ಆಸ್ಪತ್ರೆ  ಚಿಕಿತ್ಸೆ
ಅಸ್ವಸ್ಥಗೊಂಡಿರೋ ಮಕ್ಕಳಿಗೆ ಶಿರಾ ತಾಲೂಕು ಆಸ್ಪತ್ರೆ ಚಿಕಿತ್ಸೆ
ತುಮಕೂರು

ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಖಾಸಗಿ ವಸತಿ ಶಾಲೆಯ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು, ವಾಂತಿ-ಭೇದಿ ಕಾಣಿಸಿಕೊಂಡಿದ್ದು, ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಆಸ್ಪತ್ರೆಗೆ ದಾಖಲಿಸಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ನಡೆದಿದೆ.

ಶಿರಾ ನಗರದ ಪ್ರತಿಷ್ಠಿತ ಪ್ರೆಸಿಡೆನ್ಸಿ ರೆಸೆಡೆನ್ಶಿಯಲ್‌ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಗೌಡ ಒಡೆತನದ ಪ್ರೆಸಿಡೆನ್ಸಿ ಶಾಲೆಯ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಿನ್ನೆ ಮಧ್ಯಾಹ್ನ ಏಕಾಏಕಿ ಹೊಟ್ಟೆ ನೋವು, ವಾಂತಿ-ಭೇದಿ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ತಕ್ಷಣವೇ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಬಳಿಕ ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ವಿದ್ಯಾರ್ಥಿಗಳಿಗೆ ನಿನ್ನೆ ಬೆಳಿಗ್ಗೆಯ ತಿಂಡಿಗೆ ದೋಸೆಯನ್ನ ನೀಡಲಾಗಿತ್ತು. ಮಧ್ಯಾಹ್ನ ಊಟಕ್ಕೆ ಮೊಳಕೆ ಹುರಳಿ ಸಾರು ಮತ್ತು ಅನ್ನವನ್ನ ಊಟ ಮಾಡಿದ್ರು. ಸಂಜೆ ೪ ಗಂಟೆಯ ನಂತರ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಹೀಗಾಗಿ ೬೦ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ಸದ್ಯ ಅಸ್ವಸ್ಥಗೊಂಡಿರೋ ಮಕ್ಕಳಿಗೆ ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ವಿದ್ಯಾರ್ಥಿಗಳು ಸ್ವಲ್ಪ ಚೇತರಿಸಿಕೊಳ್ತಿದ್ದಾರೆ.

Author:

share
No Reviews