SIRA -
ತುಮಕೂರು ಮೂಲಕ ಶಿರಾ ನಗರದ ಪ್ರವೇಶಿಸವ ಫ್ಲೈ ಓವರ್ನಲ್ಲಿ ಬೀದಿ ದೀಪಗಳು ಕೈಕೊಟ್ಟಿದ್ದು, ರಾತ್ರಿ ವೇಳೆ ಸವಾರರು ಪ್ರಯಾಣ ಮಾಡುವುದೇ ದೊಡ್ಡ ಸವಾಲಾಗಿದೆ. ಬೀದಿ ದೀಪಗಳು ಸರಿಯಾಗಿ ಬೆಳಗದ ಹಿನ್ನೆಲೆ ಪ್ರಯಾಣಿಕರು ಕತ್ತಲೆ ಕೂಪದಲ್ಲಿಯೇ ಪ್ರಯಾಣಿಸುವ ಅನಿವಾರ್ಯತೆ ಇದ್ದು, ಅಪಘಾತಗಳಾಗುವ ಸಾದ್ಯತೆ ಹೆಚ್ಚಾಗಿದೆ.
ಹೌದು, ತುಮಕೂರು ರಸ್ತೆಯ ಮೂಲಕ ನಗರ ಪ್ರವೇಶಿಸವ ಗುಮ್ಮನ ಹಳ್ಳಿಯ ಬಳಿ ಇರೋ ಫ್ಲೈ ಓವರ್ನಲ್ಲಿ ರಾತ್ರಿ ಆದ್ರೆ ಸಾಕು ಫುಲ್ ಕತ್ತಲು.. ಒಂದೇ ಒಂದು ಚೂರು ಕೂಡ ಬೆಳಕು ಇಲ್ಲ.. ಈ ಕಾರಣದಿಂದಲೇ ಸಾರ್ವಜನಿಕರು ರಾತ್ರಿ ವೇಳೆ ಪ್ರಯಾಣಿಕರು ಸಂಚಾರ ಮಾಡಲು ಹೆದರುತ್ತಿದ್ದಾರೆ. ಇನ್ನು ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಸೇರಿದಂತೆ ಹಲವೆಡೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಸಾವಿರಾರು ಜನ ಓಡಾಡುವ ನಗರಕ್ಕೆ ಸಂಪರ್ಕವನ್ನು ಕಲ್ಪಿಸುವ ಈ ರಸ್ತೆಯಲ್ಲಿ ಸಾರ್ವಜನಿಕರು ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ಬೀದಿ ದೀಪಗಳು ಇಲ್ಲದಿರೋದ್ರಿಂದ ಸರಗಳ್ಳತನಕ್ಕೂ ಹೆಚ್ಚು ದಾರಿ ಮಾಡಿಕೊಡುತ್ತಿದ್ದು, ಹೆಣ್ಣು ಮಕ್ಕಳು ರಾತ್ರಿ ವೇಳೆ ಓಡಾಡಲು ಹೆದರುತ್ತಿದ್ದಾರೆ. ಇನ್ನಾದ್ರು ಅಧಿಕಾರಿಗಳು, ನಗರ ಸಭೆ ಕೂಡಲೇ ಎಚ್ಚತ್ತುಕೊಂಡು ಫ್ಲೈ ಓವರ್ನಲ್ಲಿ ಅಗತ್ಯ ಇರೋ ಬೀದಿ ದೀಪಗಳನ್ನು ಅಳವಡಿಸಿ ಸಾರ್ವಜನಿಕರನ್ನು ರಕ್ಷಣೆ ಮಾಡಬೇಕಿದೆ.